HomeKarnatakaರಸ್ತೆ ಅಪಘಾತ ಪ್ರಕರಣ : ಲಾರಿ ಚಾಲಕನಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ ದಂಡ...

ರಸ್ತೆ ಅಪಘಾತ ಪ್ರಕರಣ : ಲಾರಿ ಚಾಲಕನಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದ ಕೋರ್ಟ್ !

ಧಾರವಾಡ : ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯ ಧಾರವಾಡ-ಹುಬ್ಬಳ್ಳಿ ಬೈಪಾಸ್ ರಸ್ತೆಯ ಮೈಕ್ರೋಫಿನಿಶ್ ಫ್ಯಾಕ್ಟರಿ ಸಮೀಪ ಏಪ್ರಿಲ್ 3, 2015 ರಂದು ರಾತ್ರಿ 8:45 ಗಂಟೆ ಸುಮಾರಿಗೆ ಆರೋಪಿತನು ತಾನು ನಡೆಸುತ್ತಿದ್ದ ಲಾರಿ (ಸಂಖ್ಯೆ: ಕೆಎಲ್-13/ಎಲ್-0081) ಯನ್ನು ಹುಬ್ಬಳ್ಳಿ ಕಡೆಯಿಂದ ಅತಿ ವೇಗವಾಗಿ ಹಾಗೂ ನಿಷ್ಕಾಳಜಿತನದಿಂದ, ಮಾನವ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದಿದ್ದನು. ತನ್ನ ಲಾರಿಯ ಮುಂದೆ ಹೋಗುತ್ತಿದ್ದ ಟ್ರ್ಯಾಕ್ಟರ್ (ಸಂಖ್ಯೆ: ಕೆಎ 25/ಟಿಎ-0389-0390) ಅನ್ನು ಓವರ್‌ಟೇಕ್ ಮಾಡಲು (ಸೈಡ್ ಹೊಡೆಯಲು) ಹೋಗಿ, ಲಾರಿಯ ವೇಗವನ್ನು ನಿಯಂತ್ರಿಸಲು ಸಾಧ್ಯವಾಗದೇ ಸದರಿ ಟ್ರ್ಯಾಕ್ಟರ್‌ಗೆ ಹಿಂದಿನಿಂದ ಜೋಡಿಯಾಗಿ ಡಿಕ್ಕಿ ಪಡಿಸಿದ್ದನು.

ಈ ಅಪಘಾತದಿಂದಾಗಿ ಟ್ರ್ಯಾಕ್ಟರ್ ಪಲ್ಟಿಯಾಗಿ ಬಿದ್ದಿದ್ದು, ಟ್ರ್ಯಾಕ್ಟರ್ ಚಾಲಕನಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದವು. ಅಲ್ಲದೆ, ಟ್ರ್ಯಾಕ್ಟರ್ ಇಂಜಿನ್‌ನ ಮಡ್‌ಗಾರ್ಡ್ ಮೇಲೆ ಕುಳಿತಿದ್ದ ಬಸವರಾಜ ತಿಪ್ಪಣ್ಣ ಕಟಗಿ ಎಂಬುವವರಿಗೆ ಸ್ಥಳದಲ್ಲಿಯೇ ಮರಣ ಹೊಂದುವಂತೆ ತೀವ್ರ ಗಾಯಗಳಾಗಿದ್ದವು. ಅಪಘಾತದ ನಂತರ ಚಾಲಕನು ಗಾಯಾಳುಗಳಿಗೆ ಉಪಚಾರ ಮಾಡಲು ಸಹಕರಿಸದೇ ಹಾಗೂ ಘಟನೆಯ ವಿಷಯವನ್ನು ಪೊಲೀಸ್ ಠಾಣೆಗೆ ತಿಳಿಸದೇ ತನ್ನ ಲಾರಿಯನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದನು. ಈ ಕುರಿತು ಅಪರಾಧ ಕಲಂ 279, 304(ಎ), 337 ಐಪಿಸಿ ಮತ್ತು 134 ಸಹಕಲಂ 187 ಎಂ.ವಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಾಗಿತ್ತು.

ಸಹಾಯಕ ಸರ್ಕಾರಿ ಅಭಿಯೋಜಕಿ ರಂಜಿತಾ ಅಳಗುಂಡಿ ಅವರು ನ್ಯಾಯಾಲಯಕ್ಕೆ ಸಾಕ್ಷಿದಾರರನ್ನು ಹಾಜರುಪಡಿಸಿದ್ದರು. ಅಭಿಯೋಜನಾ ಪರವಾಗಿ ಸಾಕ್ಷಿಗಳ ವಿಚಾರಣೆ ನಡೆಸಿದ ನಂತರ, ಧಾರವಾಡದ ಮಾನ್ಯ 2ನೇ ಹೆಚ್ಚುವರಿ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮೋಹಿತ್ ಬಿ.ಎಂ ಅವರು ವಿಚಾರಣೆ ನಡೆಸಿ ಆರೋಪಿಯಾದ ಪರಮೇಶ್ವರ ಹೊರಕೇರಿ ಎಂಬಾತನು ಅಪರಾಧ ಎಸಗಿರುವುದು ರುಜುವಾತಾಗಿದೆ ಎಂದು ಪ್ರಕಟಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿನ್ನೆಲೆಯಲ್ಲಿ ಏಪ್ರಿಲ್ 02, 2026 ರಂದು ನ್ಯಾಯಾಲಯವು ಈ ಕೆಳಗಿನಂತೆ ತೀರ್ಪು ನೀಡಿದೆ:

  • ಕಲಂ 304(ಎ) ಐಪಿಸಿ ಅಡಿಯಲ್ಲಿ: 1 ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ 1,000 ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದಲ್ಲಿ 15 ದಿನ ಸಾದಾ ಜೈಲು ಶಿಕ್ಷೆ ಅನುಭವಿಸಬೇಕು.
  • ಕಲಂ 279 ಐಪಿಸಿ ಅಡಿಯಲ್ಲಿ: 1,000 ರೂ. ದಂಡ ವಿಧಿಸಲಾಗಿದ್ದು, ದಂಡ ತಪ್ಪಿದಲ್ಲಿ 15 ದಿನಗಳ ಸಾದಾ ಜೈಲು ಶಿಕ್ಷೆ ವಿಧಿಸಲಾಗಿದೆ.
  • ಕಲಂ 337 ಐಪಿಸಿ ಅಡಿಯಲ್ಲಿ: 500 ರೂ. ದಂಡ ವಿಧಿಸಲಾಗಿದ್ದು, ದಂಡ ತಪ್ಪಿದಲ್ಲಿ 15 ದಿನಗಳ ಸಾದಾ ಜೈಲು ಶಿಕ್ಷೆ ವಿಧಿಸಲಾಗಿದೆ.
  • ಕಲಂ 134 ರ/ವಿ 187 ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ: 500 ರೂ. ದಂಡ ವಿಧಿಸಲಾಗಿದ್ದು, ದಂಡ ತಪ್ಪಿದಲ್ಲಿ 15 ದಿನಗಳ ಸಾದಾ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಅಕ್ಷಯ್ ವಾಲಿ ಅವರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿ ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಧಾರವಾಡದ 2ನೇ ಜೆ.ಎಂ.ಎಫ್.ಸಿ ನ್ಯಾಯಾಲಯವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular