ಪಾಟ್ನಾ: ಆರ್ ಜೆಡಿ ಕಾರ್ಯಕರ್ತರೊಬ್ಬರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದು ಪರಾರಿಯಾಗಿದ್ದಾರೆ.
ಪಾಟ್ನಾದ ರಾಜೇಂದ್ರ ನಗರ ಟರ್ಮಿನಲ್ ಬಳಿ ಈ ಘಟನೆ ನಡೆದಿದೆ. ಹತ್ಯೆಯಾದ ಕಾರ್ಯಕರ್ತನನ್ನು ರಾಜ್ ಕುಮಾರ್ ಅಲಿಯಾಸ್ ಅಲಾ ರಾಯ್ ಎಂದು ಗುರುತಿಸಲಾಗಿದೆ. ಮೃತ ರಾಜ್ ಕುಮಾರ್ ವೈಶಾಲಿ ಜಿಲ್ಲೆಯವರು.
ಗುಂಡೇಟು ತಗುಲಿ ಬಿದ್ದಿದ್ದ ರಾಜ್ ಕುಮಾರ್ ನನ್ನು ಪೊಲೀಸರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಸ್ಥಳದಿಂದ ಆರು ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಹಲವು ದುಷ್ಕರ್ಮಿಗಳು ದಾಳಿ ನಡೆಸಿರುವ ಸಾಧ್ಯತೆ ಇದೆ. ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪಾಟ್ನಾ ಪೂರ್ವ ವಿಭಾಗದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.