HomeKarnatakaಹಬ್ಬದ ದಿನವೇ ಘೋರ ದುರಂತ: ಪುಣ್ಯ ಸ್ನಾನ ಮಾಡಲು ನದಿಗೆ ಇಳಿದ ಇಬ್ಬರು ಸೋದರರು ಸಾವು

ಹಬ್ಬದ ದಿನವೇ ಘೋರ ದುರಂತ: ಪುಣ್ಯ ಸ್ನಾನ ಮಾಡಲು ನದಿಗೆ ಇಳಿದ ಇಬ್ಬರು ಸೋದರರು ಸಾವು

ವಿಜಯಪುರ: ಯುಗಾದಿ ಅಮಾವಾಸ್ಯೆಯಂದು ದೇವರ ಪಲ್ಲಕ್ಕಿ ತೊಳೆಯಲು ಮತ್ತು ಪುಣ್ಯ ಸ್ನಾನ ಮಾಡಲು ನದಿಗೆ ಇಳಿದ ಇಬ್ಬರು ಸಹೋದರರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ನಿವಾಸಿಗಳಾದ ಯಶಸ್ವಿ(13), ಶ್ರೀಧರ(10) ಮೃತಪಟ್ಟ ಬಾಲಕರು. ವಿಜಯಪುರ ಜಿಲ್ಲೆ ಕೊಲ್ಹಾರ ಪಟ್ಟಣದ ಸಮೀಪ ಕೃಷ್ಣಾ ನದಿಯಲ್ಲಿ ದೇವರ ಪಲ್ಲಕ್ಕಿ ತೊಳೆಯಲು ಮತ್ತು ಪುಣ್ಯ ಸ್ನಾನ ಮಾಡಲು ನದಿಗೆ ಇಳಿದಾಗ ಘಟನೆ ನಡೆದಿದೆ.

ಯುಗಾದಿ ಅಮಾವಾಸ್ಯೆಯಂದು ದೇವರ ಪಲ್ಲಕ್ಕಿಯೊಂದಿಗೆ ನದಿಗೆ ಆಗಮಿಸಿ ಪಲ್ಲಕ್ಕಿ ತೊಳೆದು ನದಿಯಲ್ಲಿ ಪುಣ್ಯ ಸ್ನಾನ ಮಾಡುವುದು ಇಲ್ಲಿನ ವಾಡಿಕೆಯಾಗಿದೆ. ಕಾರಜೋಳ ಗ್ರಾಮದಿಂದ ಪಲ್ಲಕ್ಕಿಯೊಂದಿಗೆ ಆಗಮಿಸಿದ್ದ ಬಾಲಕರಿಬ್ಬರು ಮೃತಪಟ್ಟಿದ್ದಾರೆ. ಹುಡುಕಾಟದ ಬಳಿಕ ಮೃತ ದೇಹಗಳನ್ನು ಮೇಲಕ್ಕೆ ತರಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular