HomeLatest Newsರೈಡ್‌ ಕ್ಯಾನ್ಸಲ್‌ ಬಳಿಕ ಬಾಡಿಗೆ ವಿಚಾರಕ್ಕೆ ಜಗಳ; ಆಟೋ ಚಾಲಕ, ಇಬ್ಬರು ಮಹಿಳೆಯರ ನಡುವೆ ಮಾರಾಮಾರಿ

ರೈಡ್‌ ಕ್ಯಾನ್ಸಲ್‌ ಬಳಿಕ ಬಾಡಿಗೆ ವಿಚಾರಕ್ಕೆ ಜಗಳ; ಆಟೋ ಚಾಲಕ, ಇಬ್ಬರು ಮಹಿಳೆಯರ ನಡುವೆ ಮಾರಾಮಾರಿ

ಬೆಂಗಳೂರು, ಸೆ. 29: ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಆಟೋ ಚಾಲಕ ಮತ್ತು ಇಬ್ಬರು ಮಹಿಳೆಯರ ನಡುವೆ ರಸ್ತೆಯಲ್ಲೇ ಜಗಳ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸೋಮವಾರ ಮಧ್ಯಾಹ್ನ 3ನೇ ಸೆಕ್ಟರ್‌ನಲ್ಲಿ ಘಟನೆ ನಡೆದಿದೆ. ದಾರಿಹೋಕರೊಬ್ಬರು ಜಗಳದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಚಾಲಕ ಮತ್ತು ಇಬ್ಬರು ಮಹಿಳೆಯರು ಪರಸ್ಪರ ತಳ್ಳಾಡಿಕೊಂಡು ಹೊಡೆದಾಡುತ್ತಿರುವುದು ಕಾಣಿಸುತ್ತದೆ.

ಪೊಲೀಸರ ಮಾಹಿತಿ ಪ್ರಕಾರ, ಇಬ್ಬರು ಮಹಿಳೆಯರು ಆ್ಯಪ್ ಮೂಲಕ ಆಟೋ ಬುಕ್ ಮಾಡಿದ್ದರು. ಬಳಿಕ ರೈಡ್‌ ಕ್ಯಾನ್ಸಲ್‌ ಮಾಡಿ, ಮತ್ತೆ ಅದೇ ಆಟೋವನ್ನು ಬುಕ್ ಮಾಡಿದ್ದರು ಎನ್ನಲಾಗಿದೆ. ನಂತರ ಪ್ರಯಾಣದ ಬಾಡಿಗೆ ವಿಚಾರದಲ್ಲಿ ಚಾಲಕ ಮತ್ತು ಮಹಿಳೆಯರ ನಡುವೆ ಮಾತಿನ ಚಕಮಕಿ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

https://x.com/gharkekalesh/status/2104757524088127573

ಮಾತಿನ ಚಕಮಕಿ ಬಳಿಕ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ವೇಳೆ ಸ್ಥಳದಲ್ಲಿದ್ದ ಮತ್ತೊಬ್ಬ ಮಹಿಳೆ ಮಧ್ಯಪ್ರವೇಶಿಸಿ ಮೂವರನ್ನು ಬೇರ್ಪಡಿಸಿದ್ದಾರೆ.

ಘಟನೆ ಸಂಬಂಧ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಾಲಕನನ್ನು ಪತ್ತೆಹಚ್ಚಿ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಲಕ ನೀಡಿರುವ ಹೇಳಿಕೆಯ ಪ್ರಕಾರ, ಮಹಿಳೆಯರು ಪ್ರಯಾಣದ ಬಾಡಿಗೆ ಪಾವತಿಸಲು ನಿರಾಕರಿಸಿ ತನ್ನೊಂದಿಗೆ ಅವಾಚ್ಯವಾಗಿ ಮಾತನಾಡಿದ್ದಾರೆ. ಅವರು ಮದ್ಯದ ಅಮಲಿನಲ್ಲಿದ್ದರು ಎಂದೂ ಚಾಲಕ ಆರೋಪಿಸಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular