HomeInternationalಬಡವರಿಗಿಂತ ಶ್ರೀಮಂತ ಜನರಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚು: ಹೊಸ ಅಧ್ಯಯನದ ವರದಿ

ಬಡವರಿಗಿಂತ ಶ್ರೀಮಂತ ಜನರಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚು: ಹೊಸ ಅಧ್ಯಯನದ ವರದಿ

ಶ್ರೀಮಂತರಿಗಿಂತ ಕಡಿಮೆ ಆದಾಯ ಹೊಂದಿರುವವರು ಹೆಚ್ಚಾಗಿ ರೋಗಗಳಿಗೆ ತುತ್ತಾಗುತ್ತಾರೆ ಎಂದು ವ್ಯಾಪಕವಾಗಿ ನಂಬಲಾಗಿದೆ. ಆದಾಗ್ಯೂ ಹೆಚ್ಚಿನ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಹೊಂದಿರುವ ಜನರಲ್ಲಿ ಕೆಲವು ರೀತಿಯ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದೆ ಎಂಬುದು ಗೊತ್ತಾಗಿದೆ.

ಇತ್ತೀಚೆಗೆ ಫಿನ್‌ಲ್ಯಾಂಡ್‌ನ ಹೆಲ್ಸಿಂಕಿ ವಿಶ್ವವಿದ್ಯಾಲಯದಲ್ಲಿ ನಡೆಸಿದ ಹೊಸ ಅಧ್ಯಯನವು ಸಾಮಾಜಿಕ-ಆರ್ಥಿಕ ಸ್ಥಿತಿ ಮತ್ತು ಹಲವಾರು ರೋಗಗಳ ನಡುವಿನ ಸಂಬಂಧವನ್ನು ಪರಿಶೀಲಿಸಿದೆ.

ಬಡವರಿಗಿಂತ ಶ್ರೀಮಂತರು ಆನುವಂಶಿಕವಾಗಿ ಹೆಚ್ಚಿನ ಕ್ಯಾನ್ಸರ್ ಅಪಾಯವನ್ನು ಹೊಂದಿರುತ್ತಾರೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. ಅಧ್ಯಯನದ ಪ್ರಕಾರ ಶ್ರೀಮಂತರು ಸ್ತನ ಕ್ಯಾನ್ಸರ್ ಮತ್ತು ಇತರ ರೀತಿಯ ಕ್ಯಾನ್ಸರ್‌ನ ಆನುವಂಶಿಕ ಅಪಾಯವನ್ನು ಹೊಂದಿರುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏತನ್ಮಧ್ಯೆ ಕಡಿಮೆ ಆರ್ಥಿಕ ಸ್ಥಿತಿಯಲ್ಲಿರುವವರು ಖಿನ್ನತೆ, ಮದ್ಯಪಾನ ಮತ್ತು ಶ್ವಾಸಕೋಶದ ಕ್ಯಾನ್ಸರ್ ಜೊತೆಗೆ ಮಧುಮೇಹ ಮತ್ತು ಸಂಧಿವಾತದಂತಹ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚು ಒಳಗಾಗುತ್ತಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಗಮನಾರ್ಹವಾಗಿ ಈ ಅಧ್ಯಯನವು ಹೆಚ್ಚಿನ ಆದಾಯದ ದೇಶಗಳ ಸಾಮಾನ್ಯವಾದ 19 ಕಾಯಿಲೆಗಳ ಸಂಬಂಧ ಪತ್ತೆಹಚ್ಚುವಲ್ಲಿ ಮೊದಲನೆಯದು.

ಅಧ್ಯಯನಕ್ಕಾಗಿ ಸಂಶೋಧನಾ ತಂಡವು 35 ರಿಂದ 80 ವರ್ಷ ವಯಸ್ಸಿನ 2,80,000 ಫಿನ್‌ಲ್ಯಾಂಡ್ ನಾಗರಿಕರಿಂದ ಆರೋಗ್ಯ ಮಾಹಿತಿ, ಅವರ ಸಾಮಾಜಿಕ-ಆರ್ಥಿಕ ಸ್ಥಿತಿ ಮತ್ತು ಜೀನೋಮಿಕ್ ಅನ್ನು ಸಂಗ್ರಹಿಸಿದೆ. ರೋಗದ ಸಂಭವವು ಗಂಡು ಮತ್ತು ಹೆಣ್ಣು ನಡುವೆ ಭಿನ್ನವಾಗಿರುತ್ತದೆ ಮತ್ತು ವಯಸ್ಸಿನ ಮೇಲೆ ಅವಲಂಬಿತವಾಗಿದೆ ಎಂದು ಅಧ್ಯಯನವು ತಿಳಿಸಿದೆ.

ಸದ್ಯ ನಿರ್ದಿಷ್ಟ ವೃತ್ತಿಗಳು ಮತ್ತು ರೋಗದ ಅಪಾಯದ ನಡುವಿನ ಸಂಪರ್ಕವನ್ನು ಅರ್ಥಮಾಡಿಕೊಳ್ಳಲು ಅಧ್ಯಯನವನ್ನು ನಡೆಸಲು ಸಂಶೋಧಕರು ಮುಂದಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular