HomeKarnatakaಮಧ್ಯಮ ವರ್ಗದವರು, ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ಅಕ್ಕಿ ದರ ಕೆಜಿಗೆ 10 ರೂ.ವರೆಗೆ ಏರಿಕೆ ಸಾಧ್ಯತೆ

ಮಧ್ಯಮ ವರ್ಗದವರು, ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ಅಕ್ಕಿ ದರ ಕೆಜಿಗೆ 10 ರೂ.ವರೆಗೆ ಏರಿಕೆ ಸಾಧ್ಯತೆ

ಬೆಂಗಳೂರು: ಈಗಾಗಲೇ ಅಗತ್ಯ ವಸ್ತು, ಇಂಧನ, ವಿದ್ಯುತ್ ದರ ಹೆಚ್ಚಳದಿಂದ ಕಂಗಾಲಾಗಿರುವ ಜನ ಸಾಮಾನ್ಯರು ಮತ್ತು ಮಧ್ಯಮ ವರ್ಗದವರಿಗೆ ಮತ್ತೊಂದು ಆಘಾತ ಎದುರಾಗಿದೆ.

ಅಕ್ಕಿ ದರ ಏರಿಕೆ ಮಾಡಲು ಕರ್ನಾಟಕ ರೈಸ್ ಮಿಲ್ಲರ್ಸ್ ಫೆಡರೇಶನ್ ಚಿಂತನೆ ನಡೆಸಿದೆ. ವಿದ್ಯುತ್ ದರ ಹೆಚ್ಚಳ ಮಾಡಿರುವುದರಿಂದ ರೈಸ್ ಮಿಲ್ ಗಳ ನಿರ್ವಹಣೆ ಭಾರಿ ಹೊರೆಯಾಗುತ್ತಿದೆ. ಇದರೊಂದಿಗೆ ಎಪಿಎಂಸಿ ಟ್ಯಾಕ್ಸ್ ಕೂಡ ಹೊರೆಯಾಗಿ ಪರಿಣಮಿಸಿದ್ದು, ಮಳೆ ಇಲ್ಲದೆ ಭತ್ತ ಸಿಗುತ್ತಿಲ್ಲ. ಹೀಗಾಗಿ ದರ ಏರಿಕೆ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರತಿ ಕೆಜಿ ಅಕ್ಕಿಗೆ ಪ್ರಸ್ತುತ 45 ರೂ.ವರೆಗೆ ದರ ಇದ್ದು, ತೆರಿಗೆ, ಕಾರ್ಮಿಕರ ವೆಚ್ಚ, ವಿದ್ಯುತ್ ಬಿಲ್ ಏರಿಕೆ ಮೊದಲಾದವುಗಳ ಹೆಚ್ಚಳದಿಂದ ರೈಸ್ ಮಿಲ್ ಮಾಲೀಕರಿಗೆ ಹೊರೆಯಾಗಿದ್ದು, ಇದನ್ನು ಸರಿದೂಗಿಸಲು ಅಕ್ಕಿ ಬೆಲೆ 5 ರಿಂದ 10 ರೂ ವರೆಗೆ ಹೆಚ್ಚಿಸುವುದು ಅನಿವಾರ್ಯವೆಂದು ಹೇಳಲಾಗಿದೆ.

ಇದರಿಂದಾಗಿ ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆಜಿವರೆಗೂ ಅಕ್ಕಿ ಸಿಗಲಿದೆ. ಆದರೆ, ಎಪಿಎಲ್ ಕಾರ್ಡ್ ದಾರರು, ಮಧ್ಯಮವರ್ಗದವರು  ಮತ್ತು ಇತರೆಯವರಿಗೆ ಅಕ್ಕಿ ದರ ಹೆಚ್ಚಳದಿಂದ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular