HomeAgricultureರಾಜ್ಯದ ರೈತರಿಗೆ ಗುಡ್ ನ್ಯೂಸ್: ಪೌತಿ ಖಾತೆ ಅಭಿಯಾನ, ವ್ಯಾಜ್ಯ ಇದ್ದರೆ ಇ-ಕೆವೈಸಿ ಮೂಲಕ ಅರ್ಜಿ...

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಪೌತಿ ಖಾತೆ ಅಭಿಯಾನ, ವ್ಯಾಜ್ಯ ಇದ್ದರೆ ಇ-ಕೆವೈಸಿ ಮೂಲಕ ಅರ್ಜಿ ಹಾಕಲು ಸೂಚನೆ

ಕಾರವಾರ: ರಾಜ್ಯದಲ್ಲಿ 48 ಲಕ್ಷ ಜಮೀನುಗಳು ನಿಧನವಾಗಿರುವ ಮಾಲೀಕರ ಹೆಸರಿನಲ್ಲಿದ್ದು, ಇವೆಲ್ಲವನ್ನೂ ಪೌತಿ ಖಾತೆ ಮೂಲಕ ಸರಿಪಡಿಸುವ ಅಭಿಯಾನ ಆರಂಭಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಜಮೀನುಗಳ ವ್ಯಾಜ್ಯ ಇದ್ದಲ್ಲಿ ಇ-ಕೆವೈಸಿ ಮೂಲಕವೇ ಅರ್ಜಿ ಹಾಕಬೇಕು. ಇಲ್ಲ ಎಂದರೆ ಪೌತಿ ಖಾತೆ ಮಾಡಿಸಬೇಕು ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಖಾಸಗಿ ಜಮೀನುಗಳ 4.10 ಕೋಟಿ ಮಾಲೀಕರಿದ್ದು, ಶೇಕಡ 85ರಷ್ಟು ಆಧಾರ್ ಜೋಡಣೆಯಾಗಿದೆ. ಉಳಿದ ಆಧಾರ್ ಜೋಡಣೆ ಕಾರ್ಯ ನಡೆಯುತ್ತಿದೆ. ನಕಲಿ ಖಾತೆ ತಡೆಯಲು ಇ- ಸ್ವತ್ತು ಕಡ್ಡಾಯ ಮಾಡಲಾಗಿದ್ದು, ಆಡಳಿತದಲ್ಲಿ ಪಾರದರ್ಶಕತೆ ತರಲು ಇ -ಆಫೀಸ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರ್ಕಾರಿ ಜಮೀನು ಸಾಗುವಳಿದಾರರಿಗೆ ಭೂಮಿ ಮಂಜೂರಾಗಿದ್ದರೂ ದುರಸ್ತಿ ಪೋಡಿ ಆಗಿಲ್ಲ. ರಾಜ್ಯದಲ್ಲಿ 5 ಲಕ್ಷ ರೈತರ ದುರಸ್ತಿ ಪೋಡಿ ಅಭಿಯಾನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular