HomeKarnatakaBIG NEWS: ಸಿಎಂ ಆದೇಶಕ್ಕೂ ಕಿಮ್ಮತ್ತು ನೀಡದ ಸಚಿವರು; ನಿವೃತ್ತ ಅಧಿಕಾರಿಯನ್ನು ಸೇವೆಯಲ್ಲಿ ಮುಂದುವರೆಸಲು ಸೂಚಿಸಿದ...

BIG NEWS: ಸಿಎಂ ಆದೇಶಕ್ಕೂ ಕಿಮ್ಮತ್ತು ನೀಡದ ಸಚಿವರು; ನಿವೃತ್ತ ಅಧಿಕಾರಿಯನ್ನು ಸೇವೆಯಲ್ಲಿ ಮುಂದುವರೆಸಲು ಸೂಚಿಸಿದ ಜಮೀರ್ ಅಹ್ಮದ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶಕ್ಕೂ ಕಿಮ್ಮತ್ತು ಕೊಡದೇ ವಸತಿ ಸಚಿವ ಜಮೀರ್ ಅಹ್ಮದ್, ನಿವೃತ್ತ ಅಧಿಕಾರಿಯನ್ನು ಸೇವೆಯಲ್ಲಿ ಮುಂದುವರೆಸುವಂತೆ ಸೂಚನೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ನಿವೃತ್ತ ಅಧಿಕಾರಿಗಳನ್ನು ಸೇವೆಯಲ್ಲಿ ಮುಂದುವರೆಸಬಾರದೆಂದು ಸಿಎಂ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಆದಾಗ್ಯೂ ಆಗಸ್ಟ್ 31ಕ್ಕೆ ನಿವೃತ್ತಿಯಾಗಲಿರುವ ಇಂಜಿನಿಯರ್ ಎಸ್.ಆರ್.ಬಾಲರಾಜು ಅವರನ್ನು ಸೇವೆಯಲ್ಲಿ ಮುಂದುವರೆಸುವಂತೆ ಸಚಿವರು ಸೂಚಿಸಿದ್ದಾರೆ.

ಕೊಳಗೇರಿ ಮಂಡಳಿ ಚೀಫ್ ಇಂಜಿನಿಯರ್ ಎಸ್.ಆರ್.ಬಾಲರಾಜು ಅವರನ್ನು ಇನ್ನೂ ಎರಡು ವರ್ಷ ಸೇವೆಯಲ್ಲಿ ಮುಂದುವರೆಸುವಂತೆ ಸಚಿವ ಜಮೀರ್ ಅಹ್ಮದ್, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸೆ.1ರಿಂದ 2 ವರ್ಷಗಳ ಕಾಲ ಎಸ್.ಆರ್.ಬಾಲರಾಜು ಅವರನ್ನು ಮುಂದುವರೆಸಬೇಕು ಎಂದು ಆದೇಶ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಸ್.ಆರ್.ಬಾಲರಾಜು 35 ವರ್ಷಗಳ ಕಾಲ ಆಯಕಟ್ಟಿನ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಆಗಸ್ಟ್ 31ಕ್ಕೆ ನಿವೃತ್ತಿಯಾಗಲಿದ್ದಾರೆ.

ನಿವೃತ್ತ ಅಧಿಕಾರಿಗಳನ್ನು ಕರ್ತವ್ಯಕ್ಕೆ ತೆಗೆದುಕೊಳ್ಳದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಎಲ್ಲಾ ಸಚಿವರುಗಳಿಗೂ ಆದೇಶ ನೀಡಿದ್ದಾರೆ. ಆದರೆ ಸಿಎಂ ಸೂಚನೆಯನ್ನು ಧಿಕ್ಕರಿಸಿ ಸಚಿವ ಜಮೀರ್ ಅಹ್ಮದ್ ನಿವೃತ್ತ ಇಂಜಿನಿಯರ್ ಅವರ ಸೇವೆ ಮುಂದುವರೆಸಲು ಹೇಳಿರುವುದು ಚರ್ಚೆಗೆ ಕಾರಣವಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular