ಸೋಲಾರ್ ಹಗರಣದ ತನಿಖೆ ನಡೆಸಿದ್ದ ನಿವೃತ್ತ ಡಿವೈಎಸ್ಪಿ ರೈಲಿಗೆ ಸಿಲುಕಿ ಸಾವು

ಆಲಪ್ಪುಳ: ಸೋಲಾರ್ ಹಗರಣ ಪ್ರಕರಣದ ತನಿಖೆ ನಡೆಸಿದ್ದ ನಿವೃತ್ತ ಡಿವೈಎಸ್‌ಪಿ ಕೆ. ಹರಿಕೃಷ್ಣನ್ ಶನಿವಾರ ಹರಿಪಾಡ್‌ನ ಏವೂರ್‌ನಲ್ಲಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಶನಿವಾರ ಮಧ್ಯರಾತ್ರಿ 12.30 ಕ್ಕೆ ಕೇರಳದ ರಾಮಪುರಂ ದೇವಸ್ಥಾನದ ಪೂರ್ವದ ಲೆವೆಲ್ ಕ್ರಾಸಿಂಗ್ ನಲ್ಲಿ ಹರಿಕೃಷ್ಣನ್ ಶವ ಪತ್ತೆಯಾಗಿದೆ. ಅಪಘಾತದ ಸ್ಥಳದ ಸಮೀಪವೇ ಅವರ ಕಾರನ್ನು ನಿಲ್ಲಿಸಲಾಗಿದ್ದು, ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ, ಪೊಲೀಸರು ಈ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಮೃತರ ಸಂಬಂಧಿಕರ ಪ್ರಕಾರ, ಹರಿಕೃಷ್ಣನ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಪೆರುಂಬವೂರಿನಲ್ಲಿ ಡಿವೈಎಸ್ಪಿ ಆಗಿದ್ದ ಹರಿಕೃಷ್ಣನ್ ಅವರು ಈ ಹಿಂದೆ ಸೋಲಾರ್ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಹಲವಾರು ಟೀಕೆಗೆ ಗುರಿಯಾಗಿದ್ದರು.

ಜುಲೈ 2013 ರಲ್ಲಿ, ಸೋಲಾರ್ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಸರಿತಾ ಎಸ್. ನಾಯರ್ ಅವರನ್ನು ತನಿಖಾಧಿಕಾರಿಯನ್ನು ಸಂಪರ್ಕಿಸದೆ ಏಕ ಪಕ್ಷಿಯವಾಗಿ ಬಂಧಿಸಿ ಹರಿಕೃಷ್ಣನ್ ಸುದ್ದಿಯಾಗಿದ್ದರು.

ಸರಿತಾ ಅವರ ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದು ಸೇರಿದಂತೆ ಹಲವು ವಿವಾದಗಳಿಗೆ ಸಂಬಂಧಿಸಿದಂತೆ ಹರಿಕೃಷ್ಣನ್ ಅನೇಕ ಆರೋಪಗಳಿಗೆ ಗುರಿಯಾಗಿದ್ದರು. ಸೋಲಾರ್ ಪ್ರಕರಣವನ್ನು ಪರಿಶೀಲಿಸಿದ ನ್ಯಾಯಾಂಗ ಆಯೋಗವು ಅವರನ್ನು ಟೀಕಿಸಿತ್ತು

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read