HomeKarnatakaವಿಷದ ಬಾಟಲಿ ನುಂಗಿದ್ದ ನಾಗರಹಾವು ರಕ್ಷಣೆ

ವಿಷದ ಬಾಟಲಿ ನುಂಗಿದ್ದ ನಾಗರಹಾವು ರಕ್ಷಣೆ

ಕಾರ್ಕಳ: ಕೋಳಿ ನುಂಗಲು ಹೋಗಿ ವಿಷದ ಬಾಟಲಿ ನುಂಗಿದ್ದ ನಾಗರಹಾವನ್ನು ರಕ್ಷಿಸಲಾಗಿದೆ. ಕಾರ್ಕಳ ತಾಲೂಕಿನ ನೀರೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿದೆ.

ಜಗದೀಶ್ ಎಂಬುವರ ಮನೆಯ ಆವರಣಕ್ಕೆ ಬಂದ ಹಾವು ಕೋಳಿಯೊಂದನ್ನು ಕಚ್ಚಿ ಸಾಯಿಸಿ ಅದನ್ನು ನುಂಗಲು ಯತ್ನಿಸಿದೆ. ಈ ವೇಳೆ ಕೋಳಿಯ ಪಕ್ಕದಲ್ಲಿ ಬಿದ್ದಿದ್ದ ವಿಷದ ಬಾಟಲಿ ಹಾವಿನ ಬಾಯಿಗೆ ಸಿಕ್ಕಿದ್ದು ಅದನ್ನೇ ನುಂಗಿದೆ.

ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ ಅವರಿಗೆ ಜಗದೀಶ್ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಗುರುರಾಜ್ ಹಾವು ಸೇರಿಕೊಂಡಿದ್ದ ಶೌಚಾಲಯದ ನೆಲ ಬಗೆದು ಹೊರ ತೆಗೆದಿದ್ದಾರೆ. ಹಾವಿನ ಹೊಟ್ಟೆ ಸೇರಿಕೊಂಡಿದ್ದ ವಿಷದ ಬಾಟಲಿಯನ್ನು ಅತಿ ಜಾಗರೂಕತೆಯಿಂದ ತಳ್ಳಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ನೀರೆ ಬೈಲೂರು ಸಮೀಪ ಕಾಡಿಗೆ ಹಾವನ್ನು ಬಿಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular