HomeLatest Newsರೇರಾ ಬಿಗ್‌ ಶಾಕ್‌: ಬಿಲ್ಡರ್‌ಗಳಿಗೆ 9 ಅಂಶಗಳ ಹೊಸ ಎಸ್‌ಒಪಿ

ರೇರಾ ಬಿಗ್‌ ಶಾಕ್‌: ಬಿಲ್ಡರ್‌ಗಳಿಗೆ 9 ಅಂಶಗಳ ಹೊಸ ಎಸ್‌ಒಪಿ

ನಿಯಮ ಉಲ್ಲಂಘಿಸಿ ಮನೆ ಖರೀದಿದಾರರಿಗೆ ವಂಚಿಸುವ ಬಿಲ್ಡರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ (K-RERA) ಮುಂದಾಗಿದೆ. ಪರಿಹಾರ ಹಾಗೂ ದಂಡದ ಮೊತ್ತ ವಸೂಲಿಯಲ್ಲಿ ಆಗುತ್ತಿರುವ ವಿಳಂಬಕ್ಕೆ ತಡೆ ನೀಡಲು ಪ್ರಾಧಿಕಾರವು ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ (SOP) ರೂಪಿಸಿದ್ದು, ತಕ್ಷಣದಿಂದಲೇ ಜಾರಿಗೆ ತಂದಿದೆ.

ಇದರಿಂದಾಗಿ, ಕಂದಾಯ ರಿಕವರಿ ಸರ್ಟಿಫಿಕೇಟ್‌ (RRC) ಕೈಯಲ್ಲಿದ್ದರೂ ಹಣ ಸಿಗದೆ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಕಚೇರಿಗಳಿಗೆ ಅಲೆಯುತ್ತಿದ್ದ ಗೃಹ ಖರೀದಿದಾರರಿಗೆ ದೊಡ್ಡ ಮಟ್ಟದ ನೆರವು ಸಿಗಲಿದೆ.

ಹೊಸ ಎಸ್‌ಒಪಿಯಲ್ಲೇನಿದೆ? ನಿಯಮಗಳು ಹೀಗಿವೆ:

60 ದಿನಗಳ ಗಡುವು: ರೇರಾ ನೀಡಿದ್ದ 60 ದಿನಗಳ ಕಾಲಾವಕಾಶ ಮುಗಿದ ತಕ್ಷಣವೇ ಅಧಿಕಾರಿಗಳು ಆದೇಶ ಪಾಲನೆಯಾಗಿದೆಯೇ ಎಂದು ಪರಿಶೀಲಿಸಬೇಕು. ಪಾಲನೆಯಾಗದಿದ್ದರೆ ವಾದಿ (ಖರೀದಿದಾರ) ಹಾಗೂ ಪ್ರತಿವಾದಿಗೆ (ಬಿಲ್ಡರ್) ಪತ್ರ ಬರೆದು ವಿವರಣೆ ಕೇಳಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆನ್‌ಲೈನ್ ಅರ್ಜಿ ಸಲ್ಲಿಕೆ: ಬಿಲ್ಡರ್ ಹಣ ಪಾವತಿಸದಿದ್ದರೆ ಖರೀದಿದಾರರು ರೇರಾ ವೆಬ್ ಪೋರ್ಟಲ್ ಮೂಲಕವೇ ಜಾರಿಗೆ ಮನವಿ ಸಲ್ಲಿಸಬಹುದು.

ಆಸ್ತಿ ವಿವರ ಸಲ್ಲಿಕೆ ಕಡ್ಡಾಯ: ಅಂತಿಮವಾಗಿ ಬಿಲ್ಡರ್ ಕಾಯಿದೆ ಸೆಕ್ಷನ್ 40(1) ಅಡಿಯಲ್ಲಿ ಆದೇಶ ಪಾಲಿಸದಿದ್ದರೆ, 2 ವಾರಗಳ ಒಳಗೆ ತಮ್ಮ ಸ್ಥಿರಾಸ್ತಿ, ಚರಾಸ್ತಿ, ಬ್ಯಾಂಕ್ ಖಾತೆ ಹಾಗೂ ಹೂಡಿಕೆಗಳ ವಿವರವನ್ನು ಪ್ರಾಧಿಕಾರಕ್ಕೆ ನೀಡಬೇಕು. ತಪ್ಪಿದಲ್ಲಿ ರೇರಾ ಕಠಿಣ ಕ್ರಮ ಕೈಗೊಳ್ಳಲಿದೆ.

ಆಸ್ತಿ ಜಪ್ತಿಗೆ ಆದೇಶ: ಅಂತಿಮ ಅವಕಾಶದ ನಂತರವೂ ಹಣ ನೀಡದ ಬಿಲ್ಡರ್‌ಗಳ ಚರಾಸ್ತಿ ಮತ್ತು ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ರೇರಾ ಸೆಕ್ಷನ್ 40ರಡಿ ಆದೇಶ ಹೊರಡಿಸಿ, ಮುಂದಿನ ಜಪ್ತಿ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ರವಾನಿಸಲಿದೆ.ಜಾರಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ರೇರಾದ ಐಟಿ ವಿಭಾಗವು ಆನ್‌ಲೈನ್‌ನಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸಲಿದೆ.

ಲಭ್ಯವಿರುವ ಅಧಿಕೃತ ದತ್ತಾಂಶಗಳ ಪ್ರಕಾರ, ಬಾಕಿ ಇರುವ ವಸೂಲಾತಿ ಪ್ರಮಾಣ ಕಳವಳಕಾರಿಯಾಗಿದೆ:

ಆರ್‌ಆರ್‌ಸಿ (RRC) ಆದೇಶ ಹೊರಡಿಸಿದ ಪ್ರಕರಣಗಳು: 2,325

ಬಾಕಿ ಇರುವ ಒಟ್ಟು ಆರ್‌ಆರ್‌ಸಿ ಮೊತ್ತ: ₹1,081.84 ಕೋಟಿ

ಈವರೆಗೆ ವಸೂಲಾಗಿರುವ ಪ್ರಕರಣಗಳು: ಕೇವಲ 282

ವಸೂಲಾದ ಮೊತ್ತ: ₹110.3 ಕೋಟಿ

ಒಟ್ಟು ವಸೂಲಾತಿಯ ಶೇಕಡಾವಾರು ಪ್ರಮಾಣ: ಕೇವಲ ಶೇ. 8

ಈವರೆಗೆ ಕೇವಲ ಶೇ. 8ರಷ್ಟು ಮಾತ್ರ ವಸೂಲಾತಿಯಾಗಿದ್ದು, ಬಿಲ್ಡರ್‌ಗಳು ಆದೇಶಕ್ಕೆ ಕ್ಯಾರೇ ಎನ್ನುತ್ತಿರಲಿಲ್ಲ. ಆದರೆ, ಹೊಸ ಎಸ್‌ಒಪಿ ಜಾರಿಯಿಂದಾಗಿ ನಿಗದಿತ ಕಾಲಮಿತಿಯಲ್ಲಿ ಹಣ ವಸೂಲಿಯಾಗಲಿದ್ದು, ಸಂಕಷ್ಟದಲ್ಲಿದ್ದ ಮನೆ ಖರೀದಿದಾರರಿಗೆ ನಿರಾಳತೆ ಸಿಗುವ ನಿರೀಕ್ಷೆಯಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular