ಹಾಜರಿದ್ದವರಿಗೆ ಮಾತ್ರ ಸ್ವಾಗತ ಕೋರು : ಹಾಸನದಲ್ಲಿ ನಿರೂಪಕನ ಮೇಲೆ ಗರಂ ಆದ ಸಿಎಂ ಸಿದ್ದರಾಮಯ್ಯ

ಹಾಸನ : ಹಾಜರಿದ್ದವರಿಗೆ ಮಾತ್ರ ಸ್ವಾಗತ ಕೋರು, ಹಾಜರು ಇಲ್ಲದವರಿಗೆ ಯಾಕೆ ಸ್ವಾಗತ ಕೋರುತ್ತೀಯಾ..? ಎಂದು ಹಾಸನದಲ್ಲಿ ನಿರೂಪಕನ ಮೇಲೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.

ಹಾಸನದ ಹಾಸನಾಂಬೆ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ನಂತರ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾರೆ. ಈ ವೇಳೆ ಈ ಘಟನೆ ನಡೆದಿದೆ.

ಸ್ವಾಗತ ಭಾಷಣದ ವೇಳೆ ಸಿಎಂ ಸಿದ್ದರಾಮಯ್ಯ ಅವರು ಗರಂ ಆಗಿದ್ದಾರೆ. ಕಾರ್ಯಕ್ರಮಕ್ಕೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಇನ್ನಿತರ ಶಾಸಕರುಗಳು ಗೈರಾಗಿದ್ದರು. ಈ ವೇಳೆ ಅವರ ಅನುಪಸ್ಥಿತಿಯಲ್ಲೂ ಅವರಿಗೆ ಸ್ವಾಗತ ಎಂದು ನಿರೂಪಕ ಹೇಳಿದ್ದ. ಈ ಹಿನ್ನಲೆ ಇಲ್ಲಿ ಹಾಜರಿರುವವರಿಗೆ ಮಾತ್ರ ಸ್ವಾಗತ ಕೋರು ಎಂದು ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read