ಮಂಗಳೂರು: ಪದೇಪದೇ ನ್ಯಾಯಾಲಯಕ್ಕೆ ಗೈರಾಗುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಬಂಧನಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ನ್ಯಾಯಾಲಯ ವಾರಂಟ್ ಜಾರಿಗೊಳಿಸಿದೆ.
ಇಂದಬೆಟ್ಟದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಮಾಡಿದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಿಶೋರ್ ಕುಮಾರ್ ದಾಖಲಿಸಿದ್ದ ಪ್ರಕರಣದ ಬೆಳ್ತಂಗಡಿ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ವಾರಂಟ್ ಜಾರಿ ಮಾಡಿದೆ.
ಇನ್ನು ತಲೆ ಬುರುಡೆ ಪ್ರಕರಣ ವರದಿ ಕುರಿತ ಆದೇಶವನ್ನು ಬೆಳ್ತಂಗಡಿ ನ್ಯಾಯಾಲಯ ಜನವರಿ 3ಕ್ಕೆ ಮುಂದೂಡಿದೆ.
ನವೆಂಬರ್ 20ರಂದು ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯಕ್ಕೆ ಸುಳ್ಳು ಸಾಕ್ಷಿ ವರದಿಯನ್ನು ಸಲ್ಲಿಸಿದ್ದಾರೆ. ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಟಿ. ಜಯಂತ್, ವಿಠ್ಠಲ್ ಗೌಡ, ಸುಜಾತ ಭಟ್ ವಿರುದ್ಧ ವರದಿ ಸಲ್ಲಿಸಲಾಗಿದೆ. ಇದರ ಬಗ್ಗೆ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಹೆಚ್.ಟಿ. ವಿಜಯೇಂದ್ರ ಅವರು ಡಿಸೆಂಬರ್ 26ರಂದು ವಿಚಾರಣೆ ನಡೆಸಿ ಡಿಸೆಂಬರ್ 29ಕ್ಕೆ ಮುಂದೂಡಿದ್ದರು.

