ದರ್ಶನ್, ಪವಿತ್ರಾಗೌಡ ರಕ್ಷಣೆಗೆ ಮುಂದಾಯ್ತಾ ಸರ್ಕಾರ…? SPP ಬದಲಾವಣೆಗೆ ಸಿಎಂ ಮೇಲೆ ಮೂವರು ಪ್ರಭಾವಿ ಸಚಿವರ ಒತ್ತಡ?

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ ಅವರನ್ನು ಗ್ಯಾಂಗ್ ನಿಂದ ಎಸ್.ಪಿ.ಪಿ. ಬದಲಾವಣೆಗೆ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

ಎಸ್.ಪಿ.ಪಿ. ಪ್ರಸನ್ನಕುಮಾರ್ ಅವರನ್ನು ಬದಲಾವಣೆ ಮಾಡಲು ಸರ್ಕಾರ ಚಿಂತನೆ ನಡೆಸಿದ್ದು, ದರ್ಶನ್ ರಕ್ಷಣೆಗೆ ಸರ್ಕಾರ ಮುಂದಾಗಿದೆ ಆದರೆ, ಎಸ್.ಪಿ.ಪಿ. ಬದಲಾಯಿಸಿದರೆ ಮತ್ತಷ್ಟು ಅನುಮಾನ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಇನ್ನೂ ಸರ್ಕಾರ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ರಕ್ಷಣೆಗೆ ಮೂವರು ಪ್ರಭಾವಿ ಸಚಿವರು ಮುಖ್ಯಮಂತ್ರಿ ಮೇಲೆ ಈ ಕುರಿತಾಗಿ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.

ದರ್ಶನ್ ಪರವಾಗಿ ಲಾಬಿ ಮಾಡುತ್ತಿರುವ ಸಚಿವರು ಕೆ.ಎನ್. ಜಗದೀಶ್ ಅಥವಾ ಭಾನುಪ್ರಕಾಶ್ ಅವರನ್ನು ನೂತನ ಎಸ್‌ಪಿಪಿಯಾಗಿ ನೇಮಕ ಮಾಡುವಂತೆ ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.

ಇನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ದರ್ಶನ್ ಬಿಗ್ ಪ್ಲಾನ್ ಮಾಡಿದ್ದರು. ತನ್ನ ಬುಡಕ್ಕೆ ಬರಬಾರದು ಎಂದು 30 ಲಕ್ಷಕ್ಕೆ ಡೀಲ್ ಕುದುರಿಸಿದ್ದರು. 30 ಲಕ್ಷ ಕೊಟ್ಟಿದ್ದು ಕೇವಲ ಸರಂಡರ್ ಆಗಲು ಅಲ್ಲ. ಪೊಲೀಸರಿಗೂ ಹಣ ನೀಡಲು ಸಹಚರನಿಗೆ ಸೂಚಿಸಿದ್ದರೆನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read