HomeEntertainmentBIG NEWS: ಜೈಲಿನಲ್ಲಿ ಬೆಳಗಿನ ಉಪಹಾರ ಸೇವಿಸದ ದರ್ಶನ್; ಮಧ್ಯಾಹ್ನದ ಊಟವೂ ಬೇಡ ಎಂದು ನಿರಾಕರಣೆ

BIG NEWS: ಜೈಲಿನಲ್ಲಿ ಬೆಳಗಿನ ಉಪಹಾರ ಸೇವಿಸದ ದರ್ಶನ್; ಮಧ್ಯಾಹ್ನದ ಊಟವೂ ಬೇಡ ಎಂದು ನಿರಾಕರಣೆ

ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ ನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ ನೀಡಿದ್ದ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ನ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸಲಾಗಿದೆ. ಇಂದು ಬೆಳಿಗ್ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ನಟ ದರ್ಶನ್ ನನ್ನು ಪೊಲೀಸ್ ಭದ್ರತೆಯಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು.

ಈ ವೇಳೆ ದರ್ಶನ್ ಬೆಳಿಗ್ಗೆ ತನಗೆ ಉಪಹಾರ ಬೇಡ ಎಂದು ನಿರಾಕರಿಸಿದ್ದ ಎನ್ನಲಾಗಿದೆ. ಇದೀಗ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್, ತನಗೆ ಮಧ್ಯಾಹ್ನದ ಊಟವೂ ಬೇಡ ಎಂದಿದ್ದಾನೆ. ಜೈಲಿನ ನಿಯಮದಂತೆ ಚಪಾತಿ, ಅನ್ನ-ಸಂಬಾರ್ ನ್ನು ಮಧ್ಯಾಹ್ನದ ಊಟಕ್ಕೆ ನೀಡಲಾಗಿತ್ತು. ಆದರೆ ದರ್ಶನ್ ತನಗೆ ಊಟ ಬೇಡ ಎಂದು ನಿರಾಕರಿಸಿದ್ದು, ಮಧ್ಯಾಹ್ನದ ಊಟ ಮಾಡಿಲ್ಲ. ಇನ್ನು ಸಂಜೆ 6 ಗಂಟೆಗೆ ರಾತ್ರಿ ಉಟ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular