ವರ್ಷದ ಹಿಂದಷ್ಟೇ ವಿವಾಹ…..ಪತ್ನಿ 3 ತಿಂಗಳ ಗರ್ಭಿಣಿ….ಕಂದಮ್ಮನ ನಿರೀಕ್ಷೆಯಲ್ಲಿದ್ದ ರೇಣುಕಾಸ್ವಾಮಿ; ನೆಚ್ಚಿನ ನಟನಿಂದಲೇ ಕೊಲೆಯಾಗಿ ಹೋದ ಅಭಿಮಾನಿ?

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನ ಬರ್ಬರ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 12 ಜನರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಸ್ವತಃ ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯೂ ಆಗಿದ್ದ ರೇಣುಕಾಸ್ವಾಮಿ, ತನ್ನ ನೆಚ್ಚಿನ ನಟನಿಂದಲೇ ಕೊಲೆಯಾಗಿ ಹೋದರಾ? ಎಂಬ ಪ್ರಶ್ನೆ ಮೂಡಿದೆ.

ಅಷ್ಟಕ್ಕೂ ಕೊಲೆಯಾಗಿರುವ ರೇಣುಕಾಸ್ವಾಮಿ ಯಾರು? ಎಂಬುದನ್ನು ನೋಡುವುದಾದರೆ ರೇಣುಕಾಸ್ವಾಮಿ ಚಿತ್ರದುರ್ಗ ನಗರದ ಲಕ್ಷ್ಮೀವೆಂಕಟೇಶ್ವರ ಬಡಾವಣೆ ನಿವಾಸಿ. ಅಪೊಲೋ ಮೆಡಿಕಲ್ ಶಾಪ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ.

ಬೆಸ್ಕಾಂ ನಿವೃತ್ತ ನೌಕರ ಶಿವನಗೌಡ ಹಾಗೂ ರತ್ನಪ್ರಭಾ ದಂಪತಿಯ ಪುತ್ರ. ಈತ ದರ್ಶನ್ ಅವರ ಅಭಿಮಾನಿ ಕೂಡ ಆಗಿದ್ದ. ಸ್ವಭಾವತಃ ಮೌನವಾಗಿ ಇರುತ್ತಿದ್ದ . ರೇಣುಕಾಸ್ವಾಮಿಗೆ ಕಳೆದ ವರ್ಷವಷ್ಟೇ ವಿವಾಹವಾಗಿದ್ದು, ಪತ್ನಿ 3 ತಿಂಗಳ ಗರ್ಭಿಣಿ. ಕಂದಮ್ಮನ ಆಗಮನದ ನಿರೀಕ್ಷೆಯಲ್ಲಿದ್ದ ರೇಣುಕಾಸ್ವಾಮಿ ಇದೀಗ ನಟನ ವಿಚಾರವಾಗಿ ಬೆಂಗಳೂರಿನಲ್ಲಿ ಕೊಲೆಯಾಗಿ ಹೋಗಿದ್ದಾನೆ.

ರೇಣುಕಾಸ್ವಾಮಿ ಭಜರಂಗದಳದಲ್ಲಿಯೂ ಗುರುತಿಸಿಕೊಂಡಿದ್ದ. 3 ವರ್ಷದ ಹಿಂದೆ ಭಜರಂಗದಳ ಸುರಕ್ಷಾ ಪ್ರಮುಖ ಆಗಿ ಗುರುತಿಸಿಕೊಂಡಿದ್ದ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read