ಆರ್ಥಿಕ ವೃದ್ಧಿಯಾಗಬೇಕೆಂದ್ರೆ ಇವುಗಳನ್ನು ಪರ್ಸ್ ನಿಂದ ಈಗಲೇ ತೆಗೆಯಿರಿ

ಪ್ರತಿಯೊಬ್ಬ ವ್ಯಕ್ತಿಯೂ ಶ್ರೀಮಂತನಾಗ್ಬೇಕೆಂದು ಬಯಸ್ತಾನೆ. ಸದಾ ಪರ್ಸ್ ನಲ್ಲಿ ಹಣವಿರಬೇಕೆಂದು ಆಶಿಸುತ್ತಾನೆ. ಕೆಲವರು ಪರ್ಸ್ ನಲ್ಲಿ ವಿಶೇಷ ವಸ್ತುಗಳನ್ನಿಟ್ಟುಕೊಳ್ತಾರೆ. ಇದ್ರಿಂದ ಅವ್ರ ಪರ್ಸ್ ನಲ್ಲಿ ಹಣ ತುಂಬಿ ತುಳುಕುತ್ತಿರುತ್ತದೆ.

ಕೆಲವೊಮ್ಮೆ ಪರ್ಸ್ ನಲ್ಲಿರುವ ವಸ್ತುವೇ ದುರಾದೃಷ್ಟಕ್ಕೆ ಕಾರಣವಾಗುತ್ತದೆ. ಸಾಲ ಮಾಡುವ ಪರಿಸ್ಥಿತಿ ಎದುರಾಗುತ್ತದೆ. ಹಾಗಾಗಿ ಪರ್ಸ್ ನಲ್ಲಿ ಯಾವ ವಸ್ತು ಇಡಬೇಕು? ಯಾವುದನ್ನು ಇಡಬಾರದು ಎಂಬುದನ್ನು ತಿಳಿದಿರಬೇಕು.

ಪರ್ಸ್ ನಲ್ಲಿ ಎಂದೂ ಹಳೆಯ ಕಾಗದಗಳನ್ನು ಇಡಬಾರದು. ಇದು ಒಳ್ಳೆಯದಲ್ಲ. ಲಕ್ಷ್ಮಿಗೂ ಇದು ಇಷ್ಟವಾಗುವುದಿಲ್ಲ. ಹಾಗಾಗಿ ಪರ್ಸ್ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು.

ಕೆಲವರು ತಮ್ಮಿಷ್ಟದ ದೇವಾನುದೇವತೆಗಳ ಫೋಟೋಗಳನ್ನು ಇಟ್ಟುಕೊಳ್ತಾರೆ. ಆದ್ರೆ ಇದು ಸರಿಯಲ್ಲ. ನೀವು ಬಯಸಿದ್ರೆ ದೇವರ ಯಂತ್ರವನ್ನು ಇಟ್ಟುಕೊಳ್ಳಬಹುದು.

ಕೆಲವರು ಹಳೆ ಬಿಲ್ ಗಳನ್ನು ಪರ್ಸ್ ನಲ್ಲಿಟ್ಟುಕೊಳ್ತಾರೆ. ಇದು ನಿಮಗೆ ಲಾಭವಾಗುವು ಬದಲು ನಷ್ಟವನ್ನುಂಟು ಮಾಡುತ್ತದೆ. ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಆರ್ಥಿಕ ವೃದ್ಧಿಯನ್ನು ಇದು ತಡೆಹಿಡಿಯುತ್ತದೆ.

ಹಳೆ ಫೋಟೋಗಳನ್ನು ಇಟ್ಟುಕೊಳ್ಳುವ ಪದ್ಧತಿ ಕೆಲವರಿಗಿರುತ್ತದೆ. ಸಾವನ್ನಪ್ಪಿದವರ ಫೋಟೋವನ್ನು ಅವ್ರ ನೆನಪಿಗಾಗಿ ನಮ್ಮ ಪರ್ಸ್ ನಲ್ಲಿಟ್ಟುಕೊಂಡಿರುತ್ತೇವೆ. ಇದು ಕೂಡ ತಪ್ಪು. ಇದು ಯಶಸ್ಸಿಗೆ ಅಡ್ಡಿಯುಂಟು ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read