HomeKarnatakaರಿಲಯನ್ಸ್ ಫೌಂಡೇಷನ್ ವಿದ್ಯಾರ್ಥಿ ವೇತನ: ಕರ್ನಾಟಕದ 680 ವಿದ್ಯಾರ್ಥಿಗಳು ಆಯ್ಕೆ

ರಿಲಯನ್ಸ್ ಫೌಂಡೇಷನ್ ವಿದ್ಯಾರ್ಥಿ ವೇತನ: ಕರ್ನಾಟಕದ 680 ವಿದ್ಯಾರ್ಥಿಗಳು ಆಯ್ಕೆ

2025-26ನೇ ಸಾಲಿನ ರಿಲಯನ್ಸ್ ಫೌಂಡೇಷನ್‌ನ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ವೇತನಕ್ಕೆ ಕರ್ನಾಟಕದ ಒಟ್ಟು 680 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ದೇಶಾದ್ಯಂತ ಆಯ್ಕೆಯಾದ ಒಟ್ಟು 5,100 ವಿದ್ಯಾರ್ಥಿಗಳಲ್ಲಿ (5,000 ಪದವಿ ಮತ್ತು 100 ಸ್ನಾತಕೋತ್ತರ ವಿದ್ಯಾರ್ಥಿಗಳು) 680 ವಿದ್ಯಾರ್ಥಿಗಳು ಕರ್ನಾಟಕದವರಾಗಿದ್ದಾರೆ.

ಅತ್ಯಂತ ಕಠಿಣವಾದ ರಾಷ್ಟ್ರೀಯ ಮಟ್ಟದ ಆಯ್ಕೆ ಪ್ರಕ್ರಿಯೆಯ ಮೂಲಕ ಈ ಫಲಿತಾಂಶ ಬಂದಿದ್ದು, ಇದು ಈ ಭಾಗದ ವಿದ್ಯಾರ್ಥಿಗಳ ಅತ್ಯುತ್ತಮ ಶೈಕ್ಷಣಿಕ ಪ್ರದರ್ಶನವನ್ನು ಎತ್ತಿ ತೋರಿಸುತ್ತದೆ.

ಭಾರತದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪೋಷಿಸುವುದು ಮತ್ತು ಆರ್ಥಿಕ ಅಡೆತಡೆಗಳಿಲ್ಲದೆ ಅವರು ಉನ್ನತ ಶಿಕ್ಷಣವನ್ನು ಮುಂದುವರಿಸಲು ಅನುವು ಮಾಡಿಕೊಡುವುದು ರಿಲಯನ್ಸ್ ಫೌಂಡೇಷನ್ ವಿದ್ಯಾರ್ಥಿ ವೇತನದ ಮುಖ್ಯ ಉದ್ದೇಶವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವರ್ಷ ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ ಶೇ 83ರಷ್ಟು ವಿದ್ಯಾರ್ಥಿಗಳು ವಾರ್ಷಿಕ 2.5 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯವಿರುವ ಕುಟುಂಬಗಳಿಂದ ಬಂದವರಾಗಿದ್ದಾರೆ. ಈ ಬಾರಿ ಯುವತಿಯರು ಮತ್ತು ದಿವ್ಯಾಂಗ ವಿದ್ಯಾರ್ಥಿಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ.

ಆಯ್ಕೆಯಾದ ಪದವಿ ವಿದ್ಯಾರ್ಥಿಗಳು 2 ಲಕ್ಷ ರೂಪಾಯಿ ತನಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು 6 ಲಕ್ಷ ರೂಪಾಯಿ ತನಕ ಧನಸಹಾಯ ಪಡೆಯಲಿದ್ದಾರೆ. ಈ ಅನುದಾನದ ಜೊತೆಗೆ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ನಾಯಕತ್ವದ ಅಭಿವೃದ್ಧಿ ಅವಕಾಶಗಳು ಮತ್ತು ಜಾಗತಿಕ ಮಟ್ಟದ ಹಳೆಯ ವಿದ್ಯಾರ್ಥಿಗಳ ಜಾಲದ ಸಂಪರ್ಕವನ್ನು ಕಲ್ಪಿಸಲಾಗುತ್ತದೆ. ಇದು ಅವರು ಭವಿಷ್ಯದ ನಾಯಕರಾಗಿ ಬೆಳೆಯಲು ಸಹಕಾರಿಯಾಗಲಿದೆ.

ಕರ್ನಾಟಕದಿಂದ ಆಯ್ಕೆಯಾದವರಲ್ಲಿ ಬೆಂಗಳೂರು ನಗರದ ಐಶ್ವರ್ಯಾ ಎಲ್. ಕೂಡ ಒಬ್ಬರು. ಇವರು ಸದ್ಯ ತಿರುವನಂತಪುರಂನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಎಂ.ಟೆಕ್. ವ್ಯಾಸಂಗ ಮಾಡುತ್ತಿದ್ದಾರೆ.

ಈ ಬಗ್ಗೆ ಸಂತಸ ಹಂಚಿಕೊಂಡ ಅವರು, “ನನ್ನ ರೀತಿಯ ಆರ್ಥಿಕ ಹಿನ್ನೆಲೆ ಇರುವ ಕುಟುಂಬದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಆರ್ಥಿಕ ಸಂಕಷ್ಟಗಳು ಅಡ್ಡಿಯಾಗುತ್ತವೆ. ಈ ವಿದ್ಯಾರ್ಥಿ ವೇತನವು ನಾನು ಸಂಪೂರ್ಣವಾಗಿ ಓದಿನತ್ತ ಗಮನಹರಿಸಲು ಮತ್ತು ಆತ್ಮವಿಶ್ವಾಸದಿಂದ ಗುರಿ ತಲುಪಲು ಸಹಾಯ ಮಾಡುತ್ತದೆ. ಈ ಪ್ರೋತ್ಸಾಹವು ನಾನು ಕಠಿಣ ಪರಿಶ್ರಮ ಪಡಲು ಮತ್ತು ಸಮಾಜಕ್ಕೆ ಮರಳಿ ಕೊಡುಗೆ ನೀಡಲು ಪ್ರೇರೇಪಿಸುತ್ತದೆ” ಎಂದು ತಿಳಿಸಿದ್ದಾರೆ.

ರಿಲಯನ್ಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಧೀರೂಭಾಯಿ ಅಂಬಾನಿ ಅವರ ದೂರದೃಷ್ಟಿಯಿಂದ ಪ್ರೇರಿತವಾಗಿರುವ ಈ ಫೌಂಡೇಷನ್ 10 ವರ್ಷಗಳಲ್ಲಿ 50,000 ವಿದ್ಯಾರ್ಥಿ ವೇತನಗಳನ್ನು ನೀಡುವುದಾಗಿ 2022ರಲ್ಲಿ ನೀತಾ ಅಂಬಾನಿ ಘೋಷಿಸಿದ್ದರು.

ಅದರ ಭಾಗವಾಗಿಯೇ  2025-26ರ ಸಾಲಿನ ಈ ಆಯ್ಕೆ ನಡೆದಿದೆ. ರಿಲಯನ್ಸ್ ಫೌಂಡೇಷನ್ ಇದುವರೆಗೆ ದೇಶದ ವಿವಿಧ ಸಾಮಾಜಿಕ-ಆರ್ಥಿಕ ಹಿನ್ನೆಲೆಯ 33,471 ಮೆರಿಟ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಿ ಬೆಂಬಲಿಸಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular