HomeEntertainment'ಸಂಜು' ಚಿತ್ರದ 'ಮತ್ತೆ ಮತ್ತೆ ಮಿಡಿಯದೆ' ಹಾಡು ರಿಲೀಸ್

‘ಸಂಜು’ ಚಿತ್ರದ ‘ಮತ್ತೆ ಮತ್ತೆ ಮಿಡಿಯದೆ’ ಹಾಡು ರಿಲೀಸ್

ಯತಿರಾಜ್ ನಿರ್ದೇಶನದ ಸಂಜು ಚಿತ್ರದ ‘ಮತ್ತೆ ಮತ್ತೆ ಮಿಡಿಯದೆ’ ಎಂಬ ಮೆಲೋಡಿ ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.

ಸ್ಯಾಂಡಲ್ ವುಡ್ ನ ಖ್ಯಾತ ಗಾಯಕರಾದ ವಾಸುಕಿ ವೈಭವ್ ಹಾಗೂ ಐಶ್ವರ್ಯ ರಂಗರಾಜನ್ ಈ ಹಾಡಿಗೆ ಧ್ವನಿಯಾಗಿದ್ದು, ವಿಜಯ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಆಕಾಶ ಹಸನ್ ಸಾಹಿತ್ಯವಿದೆ.

ರೋಮ್ಯಾಂಟಿಕ್ ಲವ್ ಸ್ಟೋರಿ ಕಥಾಧಾರಿತ ಈ ಚಿತ್ರದಲ್ಲಿ ಮನ್ವಿತ್, ಶ್ರಾವ್ಯ, ಹಾಗೂ ಸಂಗೀತ  ಪ್ರಮುಖ ಪಾತ್ರದಲ್ಲಿದ್ದು, ದಿಶಾ ಎಂಟರ್ಪ್ರೈಸಸ್ ಬ್ಯಾನರ್ ನಡಿ ಸಂತೋಷ್ ಮಹದೇವಪ್ಪ ನಿರ್ಮಾಣ ಮಾಡಿದ್ದಾರೆ. ಸಂಜೀವ್ ರೆಡ್ಡಿ ಸಂಕಲನ ಹಾಗೂ ವಿದ್ಯಾ ನಾಗೇಶ್ ಛಾಯಾಗ್ರಾಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular