HomeLive NewsBREAKING: ನಿರಾಶ್ರಿತ ಕೇಂದ್ರದಿಂದ ವಿದೇಶಿ ಅಕ್ರಮ ವಲಸಿಗ ನಾಲ್ವರು ಮಹಿಳೆಯರು ಪರಾರಿ: ಪೊಲಿಸರ ಭದ್ರತೆ ನಡುವೆಯೂ...

BREAKING: ನಿರಾಶ್ರಿತ ಕೇಂದ್ರದಿಂದ ವಿದೇಶಿ ಅಕ್ರಮ ವಲಸಿಗ ನಾಲ್ವರು ಮಹಿಳೆಯರು ಪರಾರಿ: ಪೊಲಿಸರ ಭದ್ರತೆ ನಡುವೆಯೂ ಎಸ್ಕೇಪ್

ಬೆಂಗಳೂರು: ನಿರಾಶ್ರಿತ ಕೇಂದ್ರದಿಂದ ವಿದೇಶಿ ಅಕ್ರಮ ವಲಸಿಗ ನಾಲ್ವರು ಮಹಿಳೆಯರು ಪರಾರಿಯಾಗಿರುವ ಘಟನೆ ಕೊತ್ತನೂರು ನಿರಾಶ್ರಿತ ಕೇಂದ್ರದಲ್ಲಿ ನಡೆದಿದೆ.

ಪೊಲೀಸರ ಭದ್ರತೆ ನಡುವೆಯೂ ಕಟ್ಟಡದ 2ನೇ ಅಂತಸ್ತಿನ ಕಿಟಕಿಯ ಗ್ರಿಲ್ ಮುರಿದು ಎಸ್ಕೇಪ್ ಆಗಿದ್ದಾರೆ. ಮೇ 11ರಂದು ಮುಂಜಾನೆ 3 ಗಂಟೆ ಸುಮಾರಿಗೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೈಜಿರಿಯಾ, ಉಗಾಂಡ, ಕೀನ್ಯಾ ಹಾಗೂ ಬಾಂಗ್ಲಾದ ಅಕ್ರಮ ವಲಸಿಗರಾಗಿದ್ದ ತೋಪಿಷ್ಟ, ನಗವ, ಸಫಿನಾ ಹಾಗೂ ಪಿತೀನ ಪರಾರಿಯಾಗಿರುವ ಮಹಿಳೆಯರು. ವೀಸಾ ಅವಧಿ ಮುಗಿದಿದ್ದರೂ ಅಕ್ರವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ FRRO ಜೈಲಿನಲ್ಲಿ ಇರಿಸಲಾಗಿತ್ತು. ಆದರೆ ಅಲ್ಲಿ ಜಾಅಗ ಇಲ್ಲದ ಕಾರಣ ಕೊತ್ತನೂರು ನಿರಾಶ್ತಿತ ಕೇಂದ್ರದಲ್ಲಿ ಇರಿಸಲಾಗಿತ್ತು.

ಈಗ ಇದ್ದಕ್ಕಿದ್ದಂತೆ ನಾಲ್ವರು ಮಹಿಳೆಯರು ತಪ್ಪಿಸಿಕೊಂಡಿದ್ದು, ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ ತಪ್ಪಿಸಿಕೊಂಡಿದ್ದ ಮಹಿಳೆಯರ ವಿರುದ್ಧ ಡ್ರಗ್ಸ್, ಗಾಂಜಾ ಸೇರಿದಂತೆ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಆರೋಪವಿದೆ. ವೀಸಾ ಅವಧಿ ಮುಗಿದಿದ್ದರೂ ತಮ್ಮ ದೇಶಕ್ಕೆ ಮರಳದೇ ಇಲ್ಲಿಯೇ ಇದ್ದು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಈಗ ನಿರಾಶ್ರಿತ ಕೇಂದ್ರದಿಂದ ನಾಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular