HomeLatest NewsSHOCKING: ರೀಲ್ಸ್ ಮಾಡುವಾಗ ದುರಂತ: ತನ್ನದೇ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ವ್ಯಕ್ತಿ ದುರ್ಮರಣ

SHOCKING: ರೀಲ್ಸ್ ಮಾಡುವಾಗ ದುರಂತ: ತನ್ನದೇ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ವ್ಯಕ್ತಿ ದುರ್ಮರಣ

ಕಲಬುರಗಿ: ರೀಲ್ಸ್ ಮಾಡುವಾಗ ಟ್ರ್ಯಾಕ್ಟರ್ ನಿಂದ ಕೆಳಗೆ ಬಿದ್ದ ವ್ಯಕ್ತಿ ತನ್ನದೇ ಟ್ರ್ಯಾಕ್ಟರ್ ಚಕ್ರಕೆ ಸಿಲುಕಿ ಮ್ರ‍ಿತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮಹಾಗಾಂವ್ ಗ್ರಾಮದಲ್ಲಿ ನಡೆದಿದೆ.

ಲೋಕೇಶ್ ಕಲ್ಲಪ್ಪ ಪೂಜಾರಿ ಮೃತ ದುರ್ದೈವಿ. ಬಡ ಕುಟುಂಬದಿಂದ ಬಂದಿದ್ದ ಲೋಕೇಶ್ ಚಿಕ್ಕಂದಿನಿಂದಲೇ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದ. ಲೋಕೇಶ್ ರೀಲ್ಸ್ ಮಾಡುತ್ತ ಕೃಷಿ ಚಟುವಟಿಕೆ, ಟ್ರ್ಯಾಕ್ಟರ್ ಚಾಲನೆ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದ. ಇತ್ತೀಚೆಗೆ ಯುವಕ ಲೋಕೇಶ್ ನ ಇನ್ ಸ್ಟಾ ರೀಲ್ಸ್ ಗಳು ಹೆಚ್ಚಾಗಿದ್ದವು.

ಎಂದಿನಂತೆ ರೀಲ್ಸ್ ವಿಡಿಯೋ ಮಾಡುತ್ತ ಕಬ್ಬಿನ ಗದ್ದೆಯಲ್ಲಿ ಕಬ್ಬು ನೆಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ. ಈ ವೇಳೆ ಒಂದು ಕೈಯಲ್ಲಿ ಮೊಬೈಲ್ ಹಿಡಿದು ಮತ್ತೊಂದು ಕೈಯಲ್ಲಿ ಟ್ರ್ಯಾಕ್ಟರ್ ಚಲಾಯಿಸುತ್ತಿದ. ಕೈಯಲ್ಲಿದ್ದ ಮೊಬೈಲ್ ಕೆಳಗೆ ಬಿದ್ದಿದೆ. ಮೊಬೈಲ್ ಹಿಡಿಯಲು ಯತ್ನಿಸಿದ ಲೋಕೇಶ್ ಟ್ರ್ಯಾಕ್ಟರ್ ನಿಂದ ಕೆಳಗೆ ಬಿದ್ದಿದ್ದು, ತನ್ನದೇ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ. ಮಹಾಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular