HomeHealthಕೆಂಪು ಬಾಳೆಹಣ್ಣು: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆರೋಗ್ಯ ಸೂಪರ್‌ಫುಡ್

ಕೆಂಪು ಬಾಳೆಹಣ್ಣು: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆರೋಗ್ಯ ಸೂಪರ್‌ಫುಡ್

ಕೆಂಪು ಬಾಳೆಹಣ್ಣು (Red Banana) ಈಗ ಮೆಟ್ರೋ ನಗರಗಳಲ್ಲಿ ಮಾತ್ರ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದರೂ, ಬಹುತೇಕ ಜನರಿಗೆ ಇದು ಇನ್ನೂ ಹೊಸ ಹಣ್ಣೇ. ಸಾಮಾನ್ಯ ಬಾಳೆಹಣ್ಣಿಗಿಂತ ಸ್ವಲ್ಪ ದೊಡ್ಡದಾಗಿರುವ ಈ ಹಣ್ಣು ತಿಳಿ ನೇರಳೆ ಅಥವಾ ಗಾಢ ಕೆಂಪು ಬಣ್ಣವನ್ನು ಹೊಂದಿರುತ್ತದೆ. ಇದರ ವಿಶಿಷ್ಟ ಬಣ್ಣಕ್ಕೆ ಕಾರಣ ಇದರಲ್ಲಿ ಇರುವ ಆಂಥೋಸಯಾನಿನ್ ಎಂಬ ಶಕ್ತಿಯುತ ಆಂಟಿಆಕ್ಸಿಡೆಂಟ್.

ರುಚಿಯಲ್ಲಿ ಇದು ಸಾಮಾನ್ಯ ಬಾಳೆಹಣ್ಣಿಗಿಂತ ವಿಭಿನ್ನವಾಗಿದ್ದು, ನೈಸರ್ಗಿಕ ಸಿಹಿ ಹಾಗೂ ಸುವಾಸನೆಯನ್ನು ಹೊಂದಿರುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಕೆಂಪು ಬಾಳೆಹಣ್ಣುಗಳಲ್ಲಿ ಹೆಚ್ಚಿನ ಪೋಷಕಾಂಶಗಳಿದ್ದು, ದೇಹಕ್ಕೆ ಶಕ್ತಿ ನೀಡುವ ಜೊತೆಗೆ ಹಲವು ಆರೋಗ್ಯ ಲಾಭಗಳನ್ನು ನೀಡುತ್ತದೆ.

ಕೆಂಪು ಬಾಳೆಹಣ್ಣಿನ ಪ್ರಮುಖ ಆರೋಗ್ಯ ಪ್ರಯೋಜನಗಳು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೋಗನಿರೋಧಕ ಶಕ್ತಿ ಹೆಚ್ಚಳ:
ಕೆಂಪು ಬಾಳೆಹಣ್ಣುಗಳಲ್ಲಿ ವಿಟಮಿನ್ C, ವಿಟಮಿನ್ B6 ಹಾಗೂ ಬೀಟಾ ಕ್ಯಾರೋಟಿನ್ ಹೇರಳವಾಗಿದೆ. ಇವು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿ, ಶೀತ, ಜ್ವರ ಮತ್ತು ಸೋಂಕುಗಳಿಂದ ರಕ್ಷಣೆ ನೀಡುತ್ತವೆ.

ಜೀರ್ಣಕ್ರಿಯೆಗೆ ಸಹಕಾರಿ:
ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ನಾರಿನ ಅಂಶ (ಫೈಬರ್) ಇರುವುದರಿಂದ ಮಲಬದ್ಧತೆ, ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

ಹೃದಯದ ಆರೋಗ್ಯಕ್ಕೆ ಒಳ್ಳೆಯದು:
ಪೊಟ್ಯಾಸಿಯಮ್ ಅಂಶ ಹೆಚ್ಚಿರುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ಇದರಿಂದ ಹೃದಯಾಘಾತ ಮತ್ತು ಸ್ಟ್ರೋಕ್ ಅಪಾಯವೂ ಕಡಿಮೆಯಾಗುತ್ತದೆ.

ಕಿಡ್ನಿ ಮತ್ತು ಮೂಳೆಗಳ ಆರೋಗ್ಯ:
ಕೆಂಪು ಬಾಳೆಹಣ್ಣುಗಳು ಕಿಡ್ನಿಗಳ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತವೆ. ಜೊತೆಗೆ ಮೂಳೆಗಳು ಗಟ್ಟಿಯಾಗಿರಲು ಸಹಾಯ ಮಾಡಿ, ಆಸ್ಟಿಯೋಪೋರೋಸಿಸ್ ಸಮಸ್ಯೆಯನ್ನು ದೂರ ಇಡುತ್ತವೆ.

ರಕ್ತಹೀನತೆ ನಿವಾರಣೆ:
ಕಬ್ಬಿಣಾಂಶ ಸಮೃದ್ಧವಾಗಿರುವುದರಿಂದ ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸಲು ಸಹಕಾರಿ. ವಿಶೇಷವಾಗಿ ಮಹಿಳೆಯರು ಮತ್ತು ಕಿಶೋರಿಯರಿಗೆ ಇದು ಉಪಯುಕ್ತ.

ತೂಕ ಇಳಿಕೆಗೆ ಸಹಾಯ:
ಒಂದು ಕೆಂಪು ಬಾಳೆಹಣ್ಣಿನಲ್ಲಿ ಸುಮಾರು 90–100 ಕ್ಯಾಲೋರಿ ಮಾತ್ರ ಇರುತ್ತದೆ. ಫೈಬರ್ ಹೆಚ್ಚಿರುವುದರಿಂದ ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ. ಹೀಗಾಗಿ ತೂಕ ಇಳಿಸಲು ಬಯಸುವವರಿಗೆ ಇದು ಉತ್ತಮ ಆಯ್ಕೆ.

ಕೆಂಪು ಬಾಳೆಹಣ್ಣು ಕೇವಲ ವಿಭಿನ್ನ ಬಣ್ಣದ ಹಣ್ಣು ಮಾತ್ರವಲ್ಲ, ಅದು ಆರೋಗ್ಯದ ಭಂಡಾರ. ದಿನನಿತ್ಯದ ಆಹಾರದಲ್ಲಿ ಇದನ್ನು ಸೇರಿಸಿಕೊಂಡರೆ ದೇಹಕ್ಕೆ ಶಕ್ತಿ, ರೋಗನಿರೋಧಕ ಶಕ್ತಿ ಮತ್ತು ಒಟ್ಟಾರೆ ಆರೋಗ್ಯದಲ್ಲಿ ಉತ್ತಮ ಬದಲಾವಣೆ ಕಾಣಬಹುದು.


For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular