HomeKarnatakaGOOD NEWS: ನೇರ ಗುತ್ತಿಗೆಯಡಿ ವಿಶೇಷ ಶಿಕ್ಷಕರ ನೇಮಕಾತಿ: ಇಲ್ಲಿದೆ ಮಾಹಿತಿ

GOOD NEWS: ನೇರ ಗುತ್ತಿಗೆಯಡಿ ವಿಶೇಷ ಶಿಕ್ಷಕರ ನೇಮಕಾತಿ: ಇಲ್ಲಿದೆ ಮಾಹಿತಿ

ಬೆಂಗಳೂರು: 2024 -25ನೇ ಸಾಲಿನಲ್ಲಿ ಸಮನ್ವಯ ಶಿಕ್ಷಣ ಮಧ್ಯವರ್ತನ ಕಾರ್ಯ ಚಟುವಟಿಕೆ ಅನುಷ್ಠಾನಗೊಳಿಸಲು ತಾತ್ಕಾಲಿಕವಾಗಿ ನೇರ ಗುತ್ತಿಗೆ ಅಡಿಯಲ್ಲಿ ವಿಶೇಷ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು.

2024 -25 ನೇ ಸಾಲಿನಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಮನ್ವಯ ಶಿಕ್ಷಣ ಮಧ್ಯವರ್ತನಾ ಕಾರ್ಯ ಚಟುವಟಿಕೆಗಳ ಅನುಷ್ಠಾನಕ್ಕೆ ಕಾರ್ಯಕ್ರಮಗಳು ಚಟುವಟಿಕೆಗಳ ಅನುಮೋದನೆಯಾಗಿವೆ. ಅನುಮೋದಿತ ಕಾರ್ಯಕ್ರಮಗಳಲ್ಲಿ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ವಿಶೇಷ ಶಿಕ್ಷಕರ ಸೇವೆಯನ್ನು ಒದಗಿಸಲಾಗುವುದು. ರಾಜ್ಯದ 204 ಶೈಕ್ಷಣಿಕ ಬ್ಲಾಕ್ ಗಳಲ್ಲಿ ಪ್ರಾಥಮಿಕ ವಿಭಾಗದಲ್ಲಿ ಇಬ್ಬರು ವಿಶೇಷ ಶಿಕ್ಷಕರು, ಪ್ರೌಢಶಾಲಾ ವಿಭಾಗದಲ್ಲಿ ಇಬ್ಬರು ವಿಶೇಷ ಶಿಕ್ಷಕರು ಒಟ್ಟು 816 ಹುದ್ದೆಗಳು ಸರ್ಕಾರದ ಆದೇಶದಂತೆ ಮಂಜೂರಾಗಿರುತ್ತದೆ. ಪ್ರಸಕ್ತ ಮಂಜೂರಾದ ಹುದ್ದೆಗಳಲ್ಲಿ ಅಗತ್ಯ ವಿದ್ಯಾರ್ಹತೆಯೊಂದಿಗೆ ಕಾಯಂ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಶೇಷ ಅಗತ್ಯವುಳ್ಳ ಮಕ್ಕಳ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿರುವ ಕಾಯಂ ಶಿಕ್ಷಕರ ಹೊರತುಪಡಿಸಿ ಉಳಿದ ಸ್ಥಾನಗಳಿಗೆ ತಾತ್ಕಾಲಿಕವಾಗಿ ನೇರ ಗುತ್ತಿಗೆ ಅಡಿಯಲ್ಲಿ ನಿಯಮಾನುಸಾರ ವಿಶೇಷ ಶಿಕ್ಷಕರ ಸೇವೆ ಪಡೆಯಲು ಅನುಮತಿಸಲಾಗಿದೆ. ವಿಶೇಷ ಶಿಕ್ಷಕರ ವಿದ್ಯಾರ್ಥಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಆಧರಿಸಿ ಆರ್‌ಸಿಐ ನಿಯಮಾವಳಿಗಳ ಪ್ರಕಾರ ವಿಶೇಷ ಶಿಕ್ಷಕರಿಗೆ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.

ಪೂರ್ವ ಪ್ರಾಥಮಿಕ ಶಿಕ್ಷಕರಿಗೆ 15,000 ರೂ., ಮಾಧ್ಯಮಿಕ ವಿಭಾಗ ಶಿಕ್ಷಕರಿಗೆ 20, 000, ಸೆಕೆಂಡರಿ ವಿಭಾಗ ಶಿಕ್ಷಕರಿಗೆ 25,000 ರೂ. ಮಾಸಿಕ ಸಂಭಾವನೆ ನೀಡಲಾಗುವುದು ಎಂದು ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular