ನೇಮಕಾತಿ ಸುಗ್ಗಿ: ವೇಗ ಪಡೆದುಕೊಳ್ಳಲಿದೆ ಐಟಿ ವಲಯದ ಉದ್ಯೋಗ ಮಾರುಕಟ್ಟೆ

ಮುಂಬೈ: 2025 ರಲ್ಲಿ ಐಟಿ ವಲಯದ ಉದ್ಯೋಗ ಮಾರುಕಟ್ಟೆ ಬೆಳವಣಿಗೆ ವೇಗ ಪಡೆದುಕೊಳ್ಳಲಿದೆ. ಶೇಕಡ 8.5 ರಷ್ಟು ಬೆಳವಣಿಗೆ ಇರಲಿದೆ ಎಂದು ರಿಕ್ರೂಟ್ ಹೋಲ್ಡಿಂಗ್ಸ್ ನೇಮಕಾತಿ ಕಂಪನಿ ವರದಿ ತಿಳಿಸಿದೆ.

ಕಳೆದ ವರ್ಷದ ಮಂದಗತಿಯನ್ನು ದಾಟಿ ಮಾಹಿತಿ ತಂತ್ರಜ್ಞಾನ ವಲಯದ ಉದ್ಯೋಗ ಮಾರುಕಟ್ಟೆ ವೇಗ ಪಡೆದುಕೊಳ್ಳಲಿದೆ. ಈಗ ಐಟಿ ಕ್ಷೇತ್ರದಲ್ಲಿ ಕುಶಲ ತಂತ್ರಜ್ಞರಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಮುಂದಿನ ವರ್ಷ ಬೇಡಿಕೆ ಹೆಚ್ಚಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಪ್ರಸ್ತುತ ಖಾಲಿ ಇರುವ ಉದ್ಯೋಗಗಳಲ್ಲಿ ಶೇಕಡ 70ರಷ್ಟು ಸಾಫ್ಟ್ವೇರ್ ವಲಯಕ್ಕೆ ಸಂಬಂಧಿಸಿದ್ದು, ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್, ಬ್ಲಾಕ್ ಚೈನ್ ಕ್ಷೇತ್ರಗಳಲ್ಲಿ ಕ್ಷಿಪ್ರ ಕ್ರಾಂತಿಯಾಗುತ್ತದೆ. ಇಂತಹ ಸಂದರ್ಭದಲ್ಲಿ ನುರಿತ ತಂತ್ರಜ್ಞಾನ ತುರ್ತು ಅಗತ್ಯವಿದೆ. ಇದು ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗಿದೆ.

ಸಾಫ್ಟ್ವೇರ್ ಆರ್ಕಿಟೆಕ್ಟ್, ಡಾಟಾ ಇಂಜಿನಿಯರ್ಸ್, ಎನ್.ಟಿ.ಐ. ಡೆವಲಪರ್ಸ್, ಫ್ರಂಟ್ ಎಂಡ್ ಡೆವಲಪರ್ಸ್ ಕೆಲಸಗಳ ವ್ಯಾಪ್ತಿ ಹೆಚ್ಚಾಗುತ್ತಿದ್ದು, ಕಂಪನಿಗಳು ನೇಮಕಾತಿಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಇವುಗಳಲ್ಲಿ ಗ್ಲೋಬಲ್ ಕೇಪಬಲಿಟಿ ಸೆಂಟರ್ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಇಂಡೀಡ್ ಇಂಡಿಯಾದ ಸೇಲ್ಸ್ ಮುಖ್ಯಸ್ಥರಾದ  ಶಶಿಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read