HomeKarnatakaಕೈ ಮುಗಿದು ಬೇಡಿಕೊಳ್ಳುವೆ ‘ಮೈತ್ರಿ’ ವಿಚಾರ ಮರುಪರಿಶೀಲನೆ ಮಾಡಿ : ಸಿ.ಎಂ.ಇಬ್ರಾಹಿಂ ಮನವಿ

ಕೈ ಮುಗಿದು ಬೇಡಿಕೊಳ್ಳುವೆ ‘ಮೈತ್ರಿ’ ವಿಚಾರ ಮರುಪರಿಶೀಲನೆ ಮಾಡಿ : ಸಿ.ಎಂ.ಇಬ್ರಾಹಿಂ ಮನವಿ

ಬೆಂಗಳೂರು : ಹೆಚ್ ​ಡಿ ದೇವೇಗೌಡರಿಗೆ   ಕೈ ಮುಗಿದು  ಬೇಡಿಕೊಳ್ಳುವೆ  ‘ಮೈತ್ರಿ’ ವಿಚಾರ ಮರುಪರಿಶೀಲನೆ ಮಾಡಿ ಎಂದು ಸಿ.ಎಂ.ಇಬ್ರಾಹಿಂ ಮನವಿ ಮಾಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಸಿ.ಎಂ.ಇಬ್ರಾಹಿಂ ಲೋಕಸಭೆ ಚುನಾವಣೆಗೆ ಸಮಯವಿದೆ, ಮಾತಾಡೋಣ ಎಂದಿದ್ದೇನೆ. ಕೈ ಮುಗಿದು ಪ್ರಾರ್ಥಿಸುವೆ ‘ಮೈತ್ರಿ’ ವಿಚಾರ ಮರುಪರಿಶೀಲನೆ ಮಾಡಿ ಎಂದು ಸಿ.ಎಂ.ಇಬ್ರಾಹಿಂ ಮನವಿ ಮಾಡಿದ್ದಾರೆ.

ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿಶ್ ಶಾಗೆ ಗೌರವ ಕೋಡೋಣ. ಅಕ್ಟೋಬರ್ 26ರಂದು ಮುಂಬೈಗೆ ಹೋಗುತ್ತಿದ್ದೇನೆ. ಬೇರೆ ಪಕ್ಷದ ನಾಯಕರನ್ನ ಭೇಟಿ ಮಾಡ್ತೇನೆ, ಒಂದೇ ಕಡೆ ಕೂರಲ್ಲ. ನಾನು ತ್ರಿಲೋಕ ಸಂಚಾರಿ ಎಂದು ಮಾಜಿ ಎಂಎಲ್ಸಿ ಇಬ್ರಾಹಿಂ ತಿಳಿಸಿದರು.ಜಿಲ್ಲಾಧ್ಯಕ್ಷರು, ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ. ಯಾರನ್ನೂ ನಾನು ಬಹಿರಂಗವಾಗಿ ಕರೆಯುತ್ತಿಲ್ಲ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಯಿಂದ ವಜಾಗೊಳಿಸಿದ ದಳಪತಿಗಳ ವಿರುದ್ಧ ಕಾನೂನು ಸಮರಕ್ಕೆ ಸಿ.ಎಂ. ಇಬ್ರಾಹಿಂ ಮುಂದಾಗಿದ್ದಾರೆ ಎನ್ನಲಾಗಿದೆ. ದಸರಾ ರಜೆ ಮುಗಿದ ನಂತರ ದಳಪತಿಗಳ ವಿರುದ್ಧ ಕಾನೂನು ಸಮರಕ್ಕೆ ಸಿ.ಎಂ. ಇಬ್ರಾಹಿಂ ಸಜ್ಜಾಗಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದಿಂದ ತಮ್ಮನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular