
ಅಂತಹ ಹಲವಾರು ಆಚರಣೆಗಳಲ್ಲಿ ಹೆಣ್ಣು ಮಕ್ಕಳು ಕೆನ್ನೆಗೆ ಅರಿಶಿನ ಹಚ್ಚಿಕೊಳ್ಳುವುದು ಒಂದು. ಹೀಗೆ ಅರಿಶಿನ ಹಚ್ಚಿಕೊಳ್ಳುವುದರ ಹಿಂದೆ ಸೌಭಾಗ್ಯದ ಸಂಕೇತ ಎಂಬ ನಂಬಿಕೆ ಇದೆ. ಇದು ಹೌದಾದರೂ ಅರಿಶಿನದಲ್ಲಿ ಆಂಟಿಬಯೋಟಿಕ್ ಅಂಶ ಹೇರಳವಾಗಿ ಇದೆ ಎಂಬ ಸತ್ಯ ಎಲ್ಲರಿಗೂ ಗೊತ್ತು. ಇದು ಅತ್ಯುತ್ತಮ ಸೌಂದರ್ಯವರ್ಧಕವಾಗಿ ಉಪಯೋಗಕ್ಕೆ ಬರುತ್ತದೆ.
ಕಿವಿಯ ಮುಂಭಾಗದಲ್ಲಿ ಅಂದರೆ ಕೆನ್ನೆಗೆ ಅರಿಶಿನ ಹಚ್ಚಿಕೊಳ್ಳುವ ಜಾಗದಲ್ಲಿ ಹೆಣ್ಣು ಮಕ್ಕಳಿಗೆ ಕೂದಲು ಇದ್ದರೆ ಮುಖದ ಅಂದ ಕೆಡುತ್ತದೆ. ಆದ ಕಾರಣ ಕೆನ್ನೆಗೆ ಅರಿಶಿನ ಹಚ್ಚಿಕೊಂಡರೆ ಸಹಜವಾಗಿ ಕೂದಲು ಬೆಳೆಯುವುದನ್ನು ತಡೆಗಟ್ಟಬಹುದು. ಹೆಚ್ಚು ಶ್ರಮವಿಲ್ಲದೆ, ಯಾವುದೇ ರಾಸಾಯನಿಕ ಪ್ರಯೋಗಗಳಿಗೆ ಅವಕಾಶ ಇಲ್ಲದೆ ಸುಲಭವಾಗಿ ಸೌಂದರ್ಯ ಹೆಚ್ಚಿಸಿಕೊಳ್ಳಲು ಅರಿಶಿನ ಅತ್ಯುತ್ತಮ ಔಷಧಿ.

