HomeLatest Newsಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷೆ: ಮೂರು ನಮೂನೆಯ ಮಾಹಿತಿ ಸಂಗ್ರಹ

ಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷೆ: ಮೂರು ನಮೂನೆಯ ಮಾಹಿತಿ ಸಂಗ್ರಹ

ಜಿಲ್ಲೆಯಲ್ಲಿ ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ ಕೈಗೊಳ್ಳಲಾಗಿದ್ದು, ಸಮೀಕ್ಷೆಗೆ ಸಂಬಂಧಿಸಿದಂತೆ ಸರ್ಕಾರದ ಆದೇಶದನ್ವಯ ಮೂರು ವಿವಿಧ ರೀತಿಯ ಅರ್ಜಿ ನಮೂನೆಗಳಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆಯ ಜಿಲ್ಲಾ ಮಟ್ಟದ ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ನಮೂನೆ-1: ಈಗಾಗಲೇ ಸರ್ಕಾರದಿಂದ 1993-94 ಮತ್ತು 2007-08ನೇ ಸಾಲಿನಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಹೆಸರು ನೋಂದಣಿಯಾಗಿದ್ದು, ಮರಣ ಹೊಂದಿರುವ ಮಹಿಳೆಯ ಕುಟುಂಬದ ಅಧೀಕೃತ ಸದಸ್ಯರು ಮಾಹಿತಿ ಭರ್ತಿ ಮಾಡಿ ಕೊಡಬೇಕಾದ ಅರ್ಜಿ ನಮೂನೆ-1 ರಲ್ಲಿ ಸಲ್ಲಿಸಬೇಕು.

ನಮೂನೆ-2: ಈ ಹಿಂದೆ 1993-94 ಮತ್ತು 2007-08ನೇ ಸಾಲಿನಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಹೆಸರು ನೋಂದಣಿಯಾಗದೇ ಹೊರಗುಳಿದ, ಹಾಲಿ ಜೀವಂತವಿರುವ ಹೊಸದಾಗಿ ದೇವದಾಸಿ ಪಟ್ಟಿಗೆ ಸೇರ್ಪಡೆಗೊಳ್ಳ ಬಯಸುವ ಮಾಜಿ ದೇವದಾಸಿ ಮಹಿಳೆಯರು ಮಾಹಿತಿ ಭರ್ತಿ ಮಾಡಿ ಕೊಡಬೇಕಾದ ಅರ್ಜಿ ನಮೂನೆ-2ರಲ್ಲಿ ಸಲ್ಲಿಸಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಮೂನೆ-3: ಈ ಹಿಂದೆ 1993-94 ಮತ್ತು 2007-08ನೇ ಸಾಲಿನಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಹೆಸರು ನೊಂದಣಿಯಾಗದೇ ಹೊರಗುಳಿದ ಮತ್ತು ಪ್ರಸ್ತುತ ಮರಣ ಹೊಂದಿರುವ ಮಹಿಳೆಯರ ಕುಟುಂಬದ ಅಧೀಕೃತ ಸದಸ್ಯರು ಮಾಹಿತಿ ಭರ್ತಿ ಮಾಡಿ ಕೊಡಬೇಕಾದ ಅರ್ಜಿ ನಮೂನೆ-3 ರಲ್ಲಿ ಸಲ್ಲಿಸಬೇಕು.
ಈ ಮೇಲ್ಕಂಡ ಅರ್ಜಿಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳಾದ ಮಹಿಳೆಯ ಆಧಾರ್ ಕಾರ್ಡ್ (ಮೊಬೈಲ್ ನಂಬರ್ ಲಿಂಕ್ ಇರುವ ಆಧಾರ್ ಕಾರ್ಡ್ ಸಂಖ್ಯೆ), ಮಹಿಳೆಯ ಮರಣ ಪ್ರಮಾಣ ಪತ್ರ, ವಂಶವೃಕ್ಷ, ಕುಟುಂಬದ ಅಧೀಕೃತ ಸದಸ್ಯರ ಆಧಾರ್ ಕಾರ್ಡ್, ಹೊಸ ಸೇರ್ಪಡೆ ಬಯಸುವ ಮಹಿಳೆಯರ ವಯಸ್ಸಿನ ದೃಢೀಕರಣ, ವೈದ್ಯಕೀಯ ದೃಢೀಕರಣ ಪತ್ರ, ಶಾಲಾ ದಾಖಲಾತಿ ಪತ್ರ, ಬ್ಯಾಂಕ್ ಪಾಸ್ ಪುಸ್ತಕ, ಪಡಿತರ ಚೀಟಿ, ಜಾತಿ ಆದಾಯ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರಗಳೊಂದಿಗೆ ಅರ್ಜಿಗಳನ್ನು ಸಂಬAಧಿಸಿದ ಆಯಾ ತಾಲ್ಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳಿಗೆ ಅಕ್ಟೋಬರ್ 04 ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular