HomeLatest NewsRCB ತಂಡಕ್ಕೆ ಬಿಗ್‌ ಶಾಕ್; ಗಾಯದ ಸಮಸ್ಯೆಯಿಂದ ಸೀಸನ್ ನಿಂದ ಹೊರಗುಳಿದ ರಜತ್ ಪಾಟಿದಾರ್

RCB ತಂಡಕ್ಕೆ ಬಿಗ್‌ ಶಾಕ್; ಗಾಯದ ಸಮಸ್ಯೆಯಿಂದ ಸೀಸನ್ ನಿಂದ ಹೊರಗುಳಿದ ರಜತ್ ಪಾಟಿದಾರ್

ಪ್ರಸ್ತುತ ಐಪಿಎಲ್ ನಲ್ಲಿ ಮೊದಲ ಗೆಲುವು ದಾಖಲಿಸಿರುವ ಆರ್ ಸಿ‌ ಬಿ ತಂಡಕ್ಕೆ ಭಾರೀ ಹೊಡೆತ ಬಿದ್ದಿದೆ. ತಂಡದ ಸ್ಟಾರ್ ಬ್ಯಾಟರ್ ರಜತ್ ಪಾಟಿದಾರ್ ಅವರನ್ನು ಇಡೀ ಸೀಸನ್ ನಿಂದ ಹೊರಗಿಡಲಾಗಿದೆ. ರಜತ್ ಪಾಟಿದಾರ್ ಸೀಸನ್ ನ ಮೊದಲಾರ್ಧದಲ್ಲಿ ಮಾತ್ರ ಆಡಲು ಸಾಧ್ಯವಾಗುವುದಿಲ್ಲ

ನಂತರದ ಪಂದ್ಯಗಳಲ್ಲಿ ಅವರು ಲಭ್ಯವಿರುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಇದೀಗ ಹೊರಬಿದ್ದಿರುವ ಅಪ್ ಡೇಟ್ಸ್ ನಂತೆ ಇಡೀ ಸೀಸನ್ ನಲ್ಲಿ ರಜತ್ ಪಾಟಿದಾರ್ ಆಡುವುದಿಲ್ಲ. ತಂಡದ ಫ್ರಾಂಚೈಸಿ ಈ ಬೆಳವಣಿಗೆಯನ್ನು ದೃಢಪಡಿಸಿದೆ ಮತ್ತು ಪಾಟಿದಾರ್‌ಗೆ ಬದಲಾಗಿ ಯಾವುದೇ ಆಟಗಾರನನ್ನು ಹೆಸರಿಸುವುದಿಲ್ಲ ಎಂದು ಹೇಳಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ದುರದೃಷ್ಟವಶಾತ್, ಹಿಮ್ಮಡಿ ಗಾಯದ ಕಾರಣ ರಜತ್ ಪಾಟಿದಾರ್ IPL 2023 ರಿಂದ ಹೊರಗುಳಿದಿದ್ದಾರೆ. ನಾವು ರಜತ್ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತೇವೆ ಮತ್ತು ಪ್ರಕ್ರಿಯೆಯ ಸಮಯದಲ್ಲಿ ಅವರಿಗೆ ಬೆಂಬಲವನ್ನು ನೀಡುತ್ತೇವೆ. ತರಬೇತುದಾರರು ಮತ್ತು ಆಡಳಿತವು ರಜತ್‌ಗೆ ಬದಲಿ ಆಟಗಾರನನ್ನು ಹೆಸರಿಸದಿರಲು ನಿರ್ಧರಿಸಿದೆ” ಎಂದು ಆರ್‌ ಸಿ ಬಿ ಟ್ವೀಟ್ ಮಾಡಿದೆ.

For Latest News Updates, Join Our Whatsapp Community🚩
RELATED ARTICLES

Most Popular