HomeBusinessಥರ್ಡ್ ಪಾರ್ಟಿ ಆ್ಯಪ್ ಬಳಸಿ ಪ್ರಿಪೇಯ್ಡ್ ಮೂಲಕ ಯುಪಿಐ ಪಾವತಿಗೆ RBI ಅನುಮತಿ

ಥರ್ಡ್ ಪಾರ್ಟಿ ಆ್ಯಪ್ ಬಳಸಿ ಪ್ರಿಪೇಯ್ಡ್ ಮೂಲಕ ಯುಪಿಐ ಪಾವತಿಗೆ RBI ಅನುಮತಿ

ಮುಂಬೈ: ಥರ್ಡ್ ಪಾರ್ಟಿ ಆ್ಯಪ್ ಬಳಸಿ ಪ್ರಿಪೇಯ್ಡ್ ಮೂಲಕ ಯುಪಿಐ ಪಾವತಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅನುಮತಿ ನೀಡಿದೆ.

ಪ್ರಿಪೇಯ್ಡ್ ಪಾವತಿಯ ಅವಕಾಶ ಹೊಂದಿದವರಿಗೆ ಥರ್ಡ್ ಪಾರ್ಟಿ ಮೊಬೈಲ್ ಅಪ್ಲಿಕೇಶನ್ ಬಳಸಿ ಯುಪಿಐ ಪಾವತಿಗೆ ಅವಕಾಶ ನೀಡಲಾಗಿದೆ. ಯುಪಿಐ ಮೂಲಕ ಸಂಪೂರ್ಣ ಕೆವೈಸಿ ಆಗಿರುವ ಪ್ರಿಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಸ್ ಹಣ ಪಡೆಯಲು ಹಾಗೂ ಪಾವತಿ ಮಾಡಲು ಥರ್ಡ್ ಪಾರ್ಟಿ ಮೊಬೈಲ್ ಅಪ್ಲಿಕೇಷನ್ ಬಳಸಬಹುದಾಗಿದೆ ಎಂದು ಹೇಳಲಾಗಿದೆ.

ಈ ಸೌಲಭ್ಯ ಪಡೆದುಕೊಳ್ಳಲು ಗ್ರಾಹಕರ ಸಂಪೂರ್ಣ ಕೆವೈಸಿ ಆಗಿರಬೇಕು. ಪ್ರಿಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಸ್ ಮೂಲಕ ಯುಪಿಐ ವಹಿವಾಟು ನಡೆಸಲು ಗ್ರಾಹಕರು ಸದ್ಯ ಇರುವ ಪಿಪಿಐ ದಾಖಲೆಗಳನ್ನು ದೃಢೀಕರಿಸಬೇಕಿದೆ. ಇಂತಹ ಹಣಕಾಸು ವ್ಯವಹಾರಗಳನ್ನು ಯುಪಿಐ ವ್ಯವಸ್ಥೆಗೆ ಹೋಗುವ ಮೊದಲೇ ಅನುಮತಿ ನೀಡಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಾವತಿ ವ್ಯವಸ್ಥೆ ಪೂರೈಕೆದಾರರಾಗಿ ಪಿಪಿಐ ವಿತರಕರು ಬೇರೆ ಯಾವುದೇ ಬ್ಯಾಂಕ್ ಅಥವಾ ಇತರೆ ಯಾವುದೇ ಪಿಪಿಐ ಪೂರೈಕೆದಾರರ ಗ್ರಾಹಕರಾಗಿರಬಹುದು. ಗಿಫ್ಟ್ ಕಾರ್ಡ್ ಗಳು, ಮೆಟ್ರೋ ರೈಲು ಕಾರ್ಡ್, ಡಿಜಿಟಲ್ ವ್ಯಾಲೆಟ್ ಸೇರಿದಂತೆ ಇತರೆ ಸೌಲಭ್ಯ ನೀಡುವ ಅವಕಾಶವನ್ನು ಪಿಪಿಐ ಹೊಂದಿರುವವರಿಗೆ ನೀಡುವ ಗುರಿ ಇದೆ ಎಂದು ಆರ್‌ಬಿಐ ತಿಳಿಸಿದೆ.

ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಯುಪಿಐ ಪಾವತಿ ಬ್ಯಾಂಕ್ ಖಾತೆಗಳ ನಡುವೆ ನಡೆಯುತ್ತಿದೆ. ಇದಕ್ಕಾಗಿ ಬ್ಯಾಂಕಿನ ಆ್ಯಪ್, ಇತರೆ ಥರ್ಡ್ ಪಾರ್ಟಿ ಆ್ಯಪ್ ಗಳನ್ನು ಬಳಸಲಾಗುತ್ತಿದೆ. ಇದೀಗ ಪಿಪಿಐ ಪೂರೈಕೆದಾರರ ಮೂಲಕ ಮೊಬೈಲ್ ಅಪ್ಲಿಕೇಶನ್ ಬಳಸಿ ಯುಪಿಐ ಪಾವತಿ ಮಾಡಬಹುದಾಗಿದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular