Razorpay, Cashfree ಮೇಲಿನ ನಿಷೇಧ ತೆರವುಗೊಳಿಸಿದ RBI

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(RBI) ಸುಮಾರು ಒಂದು ವರ್ಷದ ನಂತರ ಪಾವತಿ ಸಂಗ್ರಾಹಕರಾದ Razorpay ಮತ್ತು Cashfree ಮೇಲಿನ ನಿಷೇಧವನ್ನು ತೆಗೆದುಹಾಕಿದೆ.

ಪಾವತಿ ಕಂಪನಿಗಳಿಗೆ ಆನ್‌ಲೈನ್ ಪಾವತಿಗಳನ್ನು ಪ್ರಕ್ರಿಯೆಗೊಳಿಸಲು ಅದರ ಪ್ಲಾಟ್‌ಫಾರ್ಮ್‌ಗೆ ಹೊಸ ವ್ಯಾಪಾರಿಗಳನ್ನು ಆನ್‌ಬೋರ್ಡ್ ಮಾಡಲು ಆರ್.ಬಿ.ಐ. ಅನುವು ಮಾಡಿಕೊಟ್ಟಿದೆ.

ನಿಷೇಧ ತೆರವುಗೊಳಿಸುವ ಮೂಲಕ ರೇಜರ್‌ಪೇ ಮತ್ತು ಕ್ಯಾಶ್‌ಫ್ರೀಗೆ ಆನ್‌ಲೈನ್ ಪಾವತಿ ಸಂಗ್ರಾಹಕರಾಗಿ ಕಾರ್ಯಾಚರಣೆಯನ್ನು ಪುನರಾರಂಭಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರ ನೀಡಿದೆ,

ಸೈಬರ್-ದಾಳಿಗಳು, ನಿರ್ಣಾಯಕ ವ್ಯವಸ್ಥೆಗಳು /ಮೂಲಸೌಕರ್ಯಗಳ ಸ್ಥಗಿತ, ಆಂತರಿಕ ವಂಚನೆ, ಇತ್ಯರ್ಥ, ವಿಳಂಬಗಳು ಇತ್ಯಾದಿಗಳನ್ನು ಒಳಗೊಂಡಂತೆ ಪ್ರತಿ ಅಸಾಮಾನ್ಯ ಘಟನೆಯನ್ನು 24 ಗಂಟೆಗಳ ಒಳಗೆ ಸೆಂಟ್ರಲ್ ಬ್ಯಾಂಕಿನ ಪಾವತಿ ಮತ್ತು ಸೆಟಲ್ಮೆಂಟ್ ಸಿಸ್ಟಮ್ಸ್ ಇಲಾಖೆಗೆ ವರದಿ ಮಾಡಲು ತಿಳಿಸಿದೆ.

RazorPay ಇದೀಗ ಭಾರತೀಯ ರಿಸರ್ವ್ ಬ್ಯಾಂಕ್(RBI) ಯಿಂದ ಪಾವತಿ ಸೆಟಲ್ಮೆಂಟ್ ಆಕ್ಟ್ 2007 ರ ಅಡಿಯಲ್ಲಿ ಪಾವತಿ ಸಂಗ್ರಾಹಕ(PA) ಆಗಿ ಕಾರ್ಯನಿರ್ವಹಿಸಲು ಅಂತಿಮ ಅಧಿಕಾರವನ್ನು ಪಡೆದುಕೊಂಡಿದೆ. ಹೊಸ PA ಪರವಾನಗಿಯನ್ನು ಸ್ವೀಕರಿಸಿದ ನಂತರ, ನಾವು ಈಗ ಹೊಸ ಗ್ರಾಹಕರನ್ನು ಆನ್‌ಬೋರ್ಡಿಂಗ್ ಮಾಡಲು ಪ್ರಾರಂಭಿಸುತ್ತೇವೆ ಎಂದು RazorPay ವಕ್ತಾರರು ಹೇಳಿದ್ದಾರೆ.

ಆರ್‌ಬಿಐನಿಂದ ಪಾವತಿ ಅಗ್ರಿಗೇಟರ್(ಪಿಎ) ಪರವಾನಗಿಯನ್ನು ಪಡೆದುಕೊಳ್ಳುವುದು ನಗದು ರಹಿತ ಪಾವತಿಗಳಿಗೆ ಒಂದು ಪ್ರಮುಖ ಕ್ಷಣವಾಗಿದೆ. ನಾವು ಈಗ ನಮ್ಮ ಪಾವತಿ ಗೇಟ್‌ ವೇಯಲ್ಲಿ ಹೊಸ ವ್ಯಾಪಾರಿಗಳನ್ನು ಆನ್‌ ಬೋರ್ಡ್ ಮಾಡುತ್ತಿದ್ದೇವೆ ಎಂದು ಕ್ಯಾಶ್‌ಫ್ರೀ ವಕ್ತಾರರು ತಿಳಿಸಿದ್ದಾರೆ.

2022ರ ಸೆಪ್ಟೆಂಬರ್‌ನಲ್ಲಿ ಚೀನಾದ ನಕಲಿ ಸಾಲದ ಆ್ಯಪ್‌ಗಳಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ದಾಖಲಿಸಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ED) ದೇಶಾದ್ಯಂತ RazorPay, Paytm, Cashfree ಮತ್ತು PayU ಕಚೇರಿಗಳ ಮೇಲೆ ದಾಳಿ ನಡೆಸಿತು. ನಂತರ ಆರ್‌ಬಿಐ ಹೊಸ ವ್ಯಾಪಾರಿಗಳನ್ನು ಆನ್‌ಬೋರ್ಡ್ ಮಾಡುವುದನ್ನು ನಿರ್ಬಂಧಿಸಿತು. ಹೊಸ ಪಾವತಿ ಸಂಗ್ರಾಹಕಕ್ಕಾಗಿ ಪುನಃ ಅರ್ಜಿ ಸಲ್ಲಿಸುವಂತೆ ಸೂಚಿಸಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read