HomeBusinessಬ್ಯಾಂಕ್ ಗ್ರಾಹಕರಿಗೆ ಅಲರ್ಟ್: ಮೇ ತಿಂಗಳಲ್ಲಿ 9 ದಿನ ಬ್ಯಾಂಕ್ ಕ್ಲೋಸ್ ರಜೆಗಳ ಲಿಸ್ಟ್ ನೋಡಿ

ಬ್ಯಾಂಕ್ ಗ್ರಾಹಕರಿಗೆ ಅಲರ್ಟ್: ಮೇ ತಿಂಗಳಲ್ಲಿ 9 ದಿನ ಬ್ಯಾಂಕ್ ಕ್ಲೋಸ್ ರಜೆಗಳ ಲಿಸ್ಟ್ ನೋಡಿ

ಬೆಂಗಳೂರು: ನೀವು ಮುಂದಿನ ತಿಂಗಳು ಅಂದರೆ ಮೇ 2026 ರಲ್ಲಿ ಬ್ಯಾಂಕ್ ಕೆಲಸಗಳನ್ನ ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿರುವ ಹೊಸ ಪಟ್ಟಿಯ ಪ್ರಕಾರ, ಮೇ ತಿಂಗಳಲ್ಲಿ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಒಟ್ಟು 12 ರಿಂದ 13 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

ಈ ಎಲ್ಲಾ ರಜೆಗಳು ಎಲ್ಲಾ ರಾಜ್ಯಗಳಿಗೂ ಅನ್ವಯಿಸುವುದಿಲ್ಲ. ಕಾರ್ಮಿಕರ ದಿನಾಚರಣೆ ಮತ್ತು ಬಕ್ರೀದ್‌ನಂತಹ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಆಯಾ ರಾಜ್ಯಗಳ ಸಂಪ್ರದಾಯಕ್ಕೆ ತಕ್ಕಂತೆ ರಜೆ ಘೋಷಿಸಲಾಗಿದೆ. ಕರ್ನಾಟಕದಲ್ಲಿಯೂ ಈ ರಜೆಗಳ ಪ್ರಭಾವ ಇರಲಿದ್ದು, ಬ್ಯಾಂಕ್‌ಗೆ ಹೋಗುವ ಮುನ್ನ ಈ ಪಟ್ಟಿಯನ್ನು ಒಮ್ಮೆ ನೋಡಿ

ಬ್ಯಾಂಕ್‌ಗಳಿಗೆ ರಜೆ ಇದ್ದರೂ ಸಹ, ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ UPI, ಮೊಬೈಲ್ ಬ್ಯಾಂಕಿಂಗ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು 24/7 ಲಭ್ಯವಿರುತ್ತವೆ. ಆದರೆ ಚೆಕ್ ಕ್ಲಿಯರೆನ್ಸ್ ಅಥವಾ ನೇರವಾಗಿ ಬ್ಯಾಂಕ್‌ಗೆ ಹೋಗಿ ಮಾಡಬೇಕಾದ ಕೆಲಸಗಳಿದ್ದರೆ ಮುಂಚಿತವಾಗಿಯೇ ಪ್ಲಾನ್ ಮಾಡಿಕೊಳ್ಳುವುದು ಉತ್ತಮ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೇ 2026 ರಲ್ಲಿ ಬ್ಯಾಂಕ್ ರಜಾದಿನಗಳು

ಮೇ 1 (ಶುಕ್ರವಾರ): ಕಾರ್ಮಿಕರ ದಿನ (ಮೇ ಡೇ), ಮಹಾರಾಷ್ಟ್ರ ದಿನ ಮತ್ತು ಬುದ್ಧ ಪೌರ್ಣಿಮೆಯ ಅಂಗವಾಗಿ ಕರ್ನಾಟಕ, ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್ ಸೇರಿದಂತೆ ದೇಶದ ಬಹುತೇಕ ಪ್ರಮುಖ ನಗರಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

ಮೇ 9 (ಶನಿವಾರ): ರವೀಂದ್ರನಾಥ ಟ್ಯಾಗೋರ್ ಅವರ ಜನ್ಮದಿನದ ಅಂಗವಾಗಿ ಕೋಲ್ಕತ್ತಾ ಮತ್ತು ಗ್ಯಾಂಗ್ಟಾಕ್‌ನಲ್ಲಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ. (ಇದು ತಿಂಗಳ 2ನೇ ಶನಿವಾರವೂ ಹೌದು).

ಮೇ 16 (ಶನಿವಾರ): ರಾಜ್ಯ ಸ್ಥಾಪನಾ ದಿನದ ಹಿನ್ನೆಲೆ ಸಿಕ್ಕಿಂನ ಗ್ಯಾಂಗ್ಟಾಕ್‌ನಲ್ಲಿ ರಜೆ ಘೋಷಿಸಲಾಗಿದೆ.

ಮೇ 26 (ಮಂಗಳವಾರ): ಕಾಜಿ ನಜ್ರುಲ್ ಇಸ್ಲಾಂ ಅವರ ಜನ್ಮದಿನದ ನಿಮಿತ್ತ ಕೋಲ್ಕತ್ತಾ, ಅಹಮದಾಬಾದ್, ಜೈಪುರ ಮತ್ತು ಚಂಡೀಗಢದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

ಮೇ 27 (ಬುಧವಾರ): ಈದ್-ಉಲ್-ಅಧಾ (ಬಕ್ರೀದ್) ಹಬ್ಬದ ಪ್ರಯುಕ್ತ ಕರ್ನಾಟಕ, ನವದೆಹಲಿ, ಹೈದರಾಬಾದ್, ಚೆನ್ನೈ ಮತ್ತು ಪಾಟ್ನಾ ಸೇರಿದಂತೆ ದೇಶದ ಪ್ರಮುಖ ಭಾಗಗಳಲ್ಲಿ ಬ್ಯಾಂಕ್ ರಜೆ ಇರಲಿದೆ.

ಮೇ 28 (ಗುರುವಾರ): ಬಕ್ರೀದ್ ಹಬ್ಬದ ಮುಂದುವರಿದ ಭಾಗವಾಗಿ ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ.

ಕರ್ನಾಟಕದಲ್ಲಿ ಯಾವೆಲ್ಲಾ ದಿನ ರಜೆ?

ಕರ್ನಾಟಕದ ಬ್ಯಾಂಕ್ ಕ್ಯಾಲೆಂಡರ್ ಪ್ರಕಾರ ಈ ಕೆಳಗಿನ ದಿನಗಳಲ್ಲಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ:

ಮೇ 1 (ಶುಕ್ರವಾರ): ಕಾರ್ಮಿಕರ ದಿನಾಚರಣೆ (ಮೇ ಡೇ) ನಿಮಿತ್ತ ಸಾರ್ವತ್ರಿಕ ರಜೆ.

ಮೇ 27 (ಬುಧವಾರ): ಬಕ್ರೀದ್ ಹಬ್ಬದ ಪ್ರಯುಕ್ತ ರಜೆ ಇರಲಿದೆ.

ವಾರಾಂತ್ಯದ ರಜೆಗಳ ವಿವರ:

ಹಬ್ಬದ ರಜೆಗಳ ಜೊತೆಗೆ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳ ರಜೆ ಸೇರಿ ಒಟ್ಟು ಆರು ದಿನಗಳು ಬ್ಯಾಂಕ್‌ಗಳು ಮುಚ್ಚಿರುತ್ತವೆ:

ಮೇ 9: ಎರಡನೇ ಶನಿವಾರ

ಮೇ 10: ಭಾನುವಾರ

ಮೇ 17: ಭಾನುವಾರ

ಮೇ 23: ನಾಲ್ಕನೇ ಶನಿವಾರ

ಮೇ 24: ಭಾನುವಾರ

ಮೇ 31: ಭಾನುವಾರ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular