ಬೆಂಗಳೂರು: ಎಲ್ಲಾ ಧರ್ಮಕ್ಕಿಂತ ಇಸ್ಲಾಂ ಧರ್ಮ ಶ್ರೇಷ್ಠ ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿರುವ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿಕೆಗೆ ಜೆಡಿಎಸ್ ಎಂಎಲ್ ಸಿ ಭೋಜೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಧರ್ಮದ ಬಗ್ಗೆ ಪ್ರೀತಿಯಿದ್ದರೆ ಅದನ್ನು ಮನ್ನಸ್ಸಿನಲ್ಲಿ ಇಟ್ಟುಕೊಳ್ಳಿ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭೋಜೇಗೌಡ, ಧರ್ಮದ ಬಗ್ಗೆ ಪ್ರೀತಿಯಿದ್ದರೆ ಮನಸ್ಸಿನಲ್ಲಿ ಇಟ್ಟುಕೊಳ್ಳಿ ಅದನ್ನು ತೋರ್ಪಡಿಸುವ ಅಗತ್ಯವಿಲ್ಲ. ಬಸವರಾಜ್ ರಾಯರೆಡ್ಡಿಯದ್ದು ಬಾಲಿಶ ಹೇಳಿಕೆ ಎಂದಿದ್ದಾರೆ.
ರಾಜಕೀಯ ಹೇಳಿಕೆಗಳನ್ನು ನೀಡುವಾಗ ಬಾಲಿಶ ಹೇಳಿಕೆ ಕೊಡಬಾರದು. ಯಾವುದೇ ಧರ್ಮವನ್ನು ಓಲೈಸುವ ಅಗತ್ಯವಿಲ್ಲ. 1985ರಲ್ಲೇ ಮಂತ್ರಿಯಾದ ನಿಮಗೆ ಅಗಾಧ ಅನುಭವವಿದೆ. ನಿಮ್ಮ ಹೇಳಿಕೆಯಿಂದ ಹಿಂದೂಗಳಿಗೆ ಸಹಜವಾಗಿ ನೋವು ಉಂಟು ಮಾಡುತ್ತಿದೆ. ನಾನು ನಿನ್ನೆ ಈದ್ ಮಿಲಾದ್ ಕಾರ್ಯಕ್ರಮಕ್ಕೆ ಹೋಗಿದ್ದೆ. ಶ್ರೇಷ್ಠವಾದ ಧರ್ಮ ಅಂತಾ ಯಾವ ಆಧಾರ ಮೇಲೆ ಹೇಳಿದ್ರಿ. ಶ್ರೇಷ್ಠ ಧರ್ಮ ಅಂತ ಹೇಳಿದಿರಲ್ಲ ನಿಮ್ಮ ತಂದೆ ತಾಯಿಗೆ ಕೇಳಿ ಅವ್ರು ನಿಮ್ಮ ಹೇಳಿಕೆ ಒಪ್ಪುತ್ತಾರಾ ಕೇಳಿ ಎಂದು ಕಿಡಿಕಾರಿದ್ದಾರೆ.
ನಿಮ್ಮಿಂದ ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಬಾಯಿ ಚಪಲಕ್ಕೆ ಏನು ಬೇಕಾದ್ರೂ ಹೇಳಬಹುದು ಅಂತ ಬಸವರಾಜ್ ರಾಯರೆಡ್ಡಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

