IRCTC ಕಿಚನ್ ಸ್ಟಾಲ್ ನಲ್ಲಿ ಆಹಾರದ ಮೇಲೆ ಇಲಿಗಳ ಓಡಾಟ; ವಿಡಿಯೋ ವೈರಲ್

ಮಧ್ಯಪ್ರದೇಶದ IRCTC ಸ್ಟಾಲ್‌ನಲ್ಲಿ ಇಲಿಗಳು ಓಡಾಡುತ್ತಿದ್ದು ಆಹಾರವನ್ನು ತಿನ್ನುತ್ತಿರುವ ವಿಡಿಯೋ ವೈರಲ್ ಆಗಿ ರೈಲ್ವೆ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಇಟಾರ್ಸಿ ಜಂಕ್ಷನ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಈ ದೃಶ್ಯ ಚಿತ್ರೀಕರಿಸಿದ್ದಾರೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ಸಚಿವಾಲಯದ ಅಧಿಕೃತ ಖಾತೆಗಳನ್ನು ತಮ್ಮ ಪೋಸ್ಟ್ ನಲ್ಲಿ ಟ್ಯಾಗ್ ಮಾಡಿ ಸೌರಭ್ ಎಂಬ ಟ್ವಿಟರ್ ಬಳಕೆದಾರರು ವಿಡಿಯೋ ಹಂಚಿಕೊಂಡ ನಂತರ ವೈರಲ್ ಆಗುತ್ತಿದೆ.

ಐಆರ್‌ಸಿಟಿಸಿ ಸ್ಟಾಲ್‌ನ ಕೌಂಟರ್‌ನ ಸುತ್ತಲೂ ಇಲಿಗಳು ಓಡುತ್ತಿರುವುದನ್ನು 38 ಸೆಕೆಂಡ್‌ಗಳ ವೀಡಿಯೊ ತೋರಿಸಿದೆ. ರೈಲ್ವೆ ಇಲಾಖೆಯ ಆಹಾರದ ಬಗ್ಗೆ ಆತಂಕ ಮೂಡಿಸುವ ಈ ವಿಡಿಯೋದಲ್ಲಿ ಆಹಾರ ಪದಾರ್ಥಗಳನ್ನು ಮುಚ್ಚಿಲ್ಲ, ಅವುಗಳ ಮೇಲೆಯೇ ಇಲಿಗಳು ಓಡಾಡಿವೆ.

“IRCTC ಆಹಾರ ತಪಾಸಣೆ ಕರ್ತವ್ಯ ಮಾಡುತ್ತಿರುವ ಇಲಿಗಳು. ನಾನು ರೈಲ್ವೇ ನಿಲ್ದಾಣದ ಮಾರಾಟಗಾರರಿಂದ ಆಹಾರ ತಿನ್ನುವುದನ್ನು ತಪ್ಪಿಸಲು ಕಾರಣ” ಎಂದು ಸೌರಭ್ ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.

ವೀಡಿಯೊ ವೈರಲ್ ಆಗುತ್ತಿದ್ದಂತೆ ರೈಲ್ವೇ ಸೇವಾ ತನ್ನ ಅಧಿಕೃತ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದು, ಇದರ ವಿರುದ್ಧ ಕ್ರಮಕ್ಕಾಗಿ ತಮ್ಮ ಮೊಬೈಲ್ ಸಂಖ್ಯೆಯನ್ನ ಸಂದೇಶದ ಮೂಲಕ ಹಂಚಿಕೊಳ್ಳಬೇಕೆಂದು ಮನವಿ ಮಾಡಿದೆ.

ಜೊತೆಗೆ ಈ ವಿಷಯವನ್ನು ಭೋಪಾಲ್ ವಿಭಾಗದ ಸಂಬಂಧಪಟ್ಟ ಅಧಿಕಾರಿಗೆ ತಿಳಿಸಲಾಗಿದೆ ಎಂದು ರೈಲ್ವೆ ಸೇವಾ ತಿಳಿಸಿದೆ. ಭೋಪಾಲ್‌ನ ವಿಭಾಗೀಯ ರೈಲ್ವೇ ಮ್ಯಾನೇಜರ್ ಕೂಡ ವೈರಲ್ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದಾರೆ.

https://twitter.com/trainwalebhaiya/status/1743741318386618632?ref_src=twsrc%5Etfw%7Ctwcamp%5Etweetembed%7Ctwterm%5E1743741318386618632%7Ctwgr%5Ed2a87c7d88fbf8978d82435d644b94ff978808c7%7Ctwcon%5Es1_&ref_url=https%3A%2F%2Fwww.ndtv.com%2Findia-news%2Fvideo-shows-rats-feeding-on-food-at-irctc-stall-in-madhya-pradesh-railways-responds-4827247

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read