
ಹೌದು. ರಶ್ಮಿಕಾ ಅವರ ಇತ್ತೀಚಿನ ಫೋಟೋ ಮತ್ತೆ ಅಂತಹ ವದಂತಿಗಳನ್ನು ಹುಟ್ಟುಹಾಕಿದೆ. ನಟಿ ಇತ್ತೀಚೆಗೆ ಟರ್ಕಿಯಲ್ಲಿ ರಜಾದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.ರಶ್ಮಿಕಾ ಮಂದಣ್ಣ ಪೋಸ್ಟ್ ಮಾಡಿದ ಫೋಟೋಗೂ ವಿಜಯ್ ಪೋಸ್ಟ್ ಮಾಡಿದ ಫೋಟೋವು ಒಂದೇ ಸ್ಥಳವಾಗಿದೆ ಎನ್ನಲಾಗಿದ್ದು, ಅಭಿಮಾನಿಗಳು ಮತ್ತೆ ಇಬ್ಬರನ್ನು ಕಾಳೆದಿದ್ದಾರೆ. ಇಬ್ಬರು ಒಟ್ಟಿಗೆ ಸುತ್ತಾಡಿ ಬೇರೆ ಬೇರೆ ದಿನ ಫೋಟೋ ಹಾಕಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ರಶ್ಮಿಕಾ ಕ್ಲಿಕ್ಕಿಸಿಕೊಂಡ ಫೋಟೋದ ಬ್ಯಾಕ್ಗ್ರೌಂಡ್ ವಿಜಯ್ ದೇವರಕೊಂಡ ಟರ್ಕಿಯಿಂದ ಪೋಸ್ಟ್ ಮಾಡಿದ್ದ ಫೋಟೋದ ಬ್ಯಾಕ್ ಗ್ರೌಂಡ್ ಒಂದೇ ಇದೆ. ಮೊದಲೇ ಇಬ್ಬರ ಡೇಟಿಂಗ್ ಬಗ್ಗೆ ಸಾಕಷ್ಟು ಸುದ್ದಿಯಾಗಿದ್ದು, ಈ ಪೋಸ್ಟ್ನಿಂದ ಮತ್ತಷ್ಟು ಸಂಶಯ ಜಾಸ್ತಿಯಾಗಿದೆ.

