ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಚಿತ್ರವನ್ನು ಸುಕುಮಾರ್ ನಿರ್ದೇಶಿಸುತ್ತಿದ್ದಾರೆ. ಪುಷ್ಪಾ ಚಿತ್ರದ ಮೊದಲ ಭಾಗವು ಬ್ಲಾಕ್ಬಸ್ಟರ್ ಹಿಟ್ ಆಗಿದ್ದರಿಂದ, ಅದರ ಮುಂದುವರಿದ ಭಾಗವಾಗಿ ಪುಷ್ಪಾ-ದಿ ರೂಲ್ ನಿರ್ಮಿಸಲಾಗುತ್ತಿದೆ. ವಧುವಿನ ಗೆಟಪ್ ನಲ್ಲಿ , ಶ್ರೀವಲ್ಲಿ ಪಾತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು, ಅವರ ಲುಕ್ ರಿವೀಲ್ ಆಗಿದೆ.
ಆಗಸ್ಟ್ 15 ರಂದು ‘ಪುಷ್ಪ 2’ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.
ಆಶ್ಚರ್ಯಕರ ಸಂಗತಿಯೆಂದರೆ, ಲೆಜೆಂಡರಿ ನಟ ಸಂಜಯ್ ದತ್ ಪುಷ್ಪಾ ಭಾಗ -2 ರಲ್ಲಿ ನಟಿಸುವ ಸಾಧ್ಯತೆಯಿದೆ. ಬಾಲಿವುಡ್ ನಟ ಸಂಜಯ್ ದತ್ ‘ಪುಷ್ಪ 2’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಇತ್ತೀಚಿನ ಫೋಟೋ ಲೀಕ್ ಆಗಿದೆ. ರೇಷ್ಮೆ ಸೀರೆ ಉಟ್ಟ ನಟಿ ರಶ್ಮಿಕಾ ಮಂದಣ್ಣ ಆಭರಣಗಳನ್ನು ಧರಿಸಿ ಸಖತ್ ಮಿಂಚುತ್ತಿದ್ದು, ಇದೀಗ ಈ ಫೋಟೋ ವೈರಲ್ ಆಗಿದೆ.
PushpaRaj Queen Srivalli 👑✨💥@iamRashmika #Pushpa2TheRule #RashmikaMandanna #Srivalli pic.twitter.com/ooTpYgVhUu
— Rashmika Lover's❤️🩹 (@Rashuu_lovers) March 19, 2024
Actor Ajay pushpa sets on Yaganti 😍#Pushpa2 !! #PushpaTheRule !! pic.twitter.com/NonyMQa8GV
— AlluArjun Welfare Association NDL (@AIAFA_Nandyal) March 19, 2024