HomeKarnatakaನಾನು ಈಗಾಗಲೇ ಮದುವೆಯಾಗಿದ್ದೇನೆ; ಅಭಿಮಾನಿಗಳಿಗೆ ಶಾಕ್ ಕೊಟ್ಟ ರಶ್ಮಿಕಾ ಮಂದಣ್ಣ

ನಾನು ಈಗಾಗಲೇ ಮದುವೆಯಾಗಿದ್ದೇನೆ; ಅಭಿಮಾನಿಗಳಿಗೆ ಶಾಕ್ ಕೊಟ್ಟ ರಶ್ಮಿಕಾ ಮಂದಣ್ಣ

ಬೆಂಗಳೂರು: ಕೊಡಗಿನ ಬೆಡಗಿ, ನ್ಯಾಷನಲ್ ಕೃಶ್ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ. ಈಗಾಗಲೇ ನಾನು ಮದುವೆಯಾಗಿದ್ದೇನೆ ಎಂದು ಹೇಳುವ ಮೂಲಕ ಆಘಾತವನ್ನುಂಟುಮಾಡಿದ್ದಾರೆ.

ಬಹುಭಾಷಾ ನಟಿಯಾಗಿರುವ ರಶ್ಮಿಕಾ ಮಂದಣ್ಣ, ಮದುವೆ ವಿಚಾರವಾಗಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ನೀಡಿರುವ ಹೇಳಿಕೆ ಭಾರಿ ವೈರಲ್ ಆಗಿದ್ದು, ಫಾನ್ಸ್ ಗಳಿಗೆ ಆಘಾತವಾಗಿದೆ. ಮದುವೆಯಾಗಿದೆ ಎಂಬ ರಶ್ಮಿಕಾ ಹೇಳಿಕೆ ಅಭಿಮಾನಿಗಳ ತಲೆತಿರುಗುವಂತೆ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಟಾರ್ ತಾರೆಯರ ಡೇಟಿಂಗ್, ಮದುವೆ ವಿಚಾರಗಳ ಬಗ್ಗೆ ವದಂತಿಗಳು ಹೊಸದೇನಲ್ಲ. ಕೆಲ ನಟ-ನಟಿಯರು ಮದುವೆ ಬಗ್ಗೆ ನೇರಾನೇರವಾಗಿ ಹೇಳಿದರೆ ಇನ್ನು ಕೆಲವರು ಈ ಬಗ್ಗೆ ಮಾತನಾಡಲು ನಿರಾಕರಿಸುತ್ತಾರೆ. ಆದರೆ ರಶ್ಮಿಕಾ ಮಂದಣ್ಣ ತಾನು ಈಗಾಗಲೇ ಮದುವೆಯಾಗಿದ್ದೇನೆ ಎಂದು ಹೇಳಿದ್ದು ಅಚ್ಚರಿಗೆ ಕಾರಣವಾಗಿದೆ.

ಗೀತ ಗೋವಿಂದಂ, ಡೀಯರ್ ಕಾಮ್ರೇಡ್ ಚಿತ್ರದ ಬಳಿಕ ವಿಜಯ್ ದೇವರುಕೊಂಡ-ರಶ್ಮಿಕಾ ಮಂದಣ್ಣ ಸ್ನೇಹದ ಬಗ್ಗೆ ಸಾಕಷ್ಟು ಗುಸು ಗುಸು ಹರಡುತ್ತಲೇ ಇದೆ. ಈ ಮಧ್ಯೆ ಇಬ್ಬರೂ ತಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದು ಹೇಳುತ್ತಾ ವದಂತಿಗಳಿಗೆ ತೆರೆ ಎಳೆಯುತ್ತಲೇ ಇರುತ್ತಾರೆ. ಇದೀಗ ರಶ್ಮಿಕಾ ಮಂದಣ್ಣ ನನಗೆ ಈಗಾಗಲೇ ಮದುವೆಯಾಗಿದೆ ಎಂದು ಹೇಳುವ ಮೂಲಕ ದಿಢೀರ್ ಶಾಕ್ ಕೊಟ್ಟಿದ್ದಾರೆ.

ಇತ್ತೀಚೆಗೆ ಬಾಲಿವುಡ್ ನಟ ಟೈಗರ್ ಶ್ರಾಫ್ ಜೊತೆ ಸಿನಿಮಾ ಪ್ರಚಾರಕ್ಕೆ ಹೋಗಿದ್ದ ವೇಳೆ ಮದುವೆ ವಿಚಾರವಾಗಿ ನಿರೂಪಕಿ ಕೇಳಿದ ಪ್ರಶ್ನೆಗೆ ‘ನಾನು ಈಗಾಗಲೇ ಮದುವೆಯಾಗಿದ್ದೇನೆ. ನಾನು ನರುಟೊನನ್ನು ವಿವಾಹವಗಿದ್ದೇನೆ. ಅವನನ್ನು ತುಂಬಾ ಪ್ರೀತಿಸುತ್ತೇನೆ. ನನ್ನ ಮನಸ್ಸಿನಲಿ ಅವನೊಬ್ಬನೇ ಇದ್ದಾನೆ’ ಎಂದು ಹೇಳಿದ್ದಾರೆ.

ಇಷ್ಟಕ್ಕೂ ನರುಟೊ ಎನಿಮೆ ಕಾರ್ಟೂನ್ ನಲ್ಲಿ ಬರುವ ಒಂದು ಪಾತ್ರ. ಚಿಕ್ಕ ಮಕ್ಕಳಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಈ ಕಾರ್ಟೂನ್ ಪಾತ್ರವನ್ನು ಎಲ್ಲರೂ ಇಷ್ಟಪಡುತ್ತಾರೆ. ಇದೀಗ ಈ ಕಾರ್ಟೂನ್ ಪಾತ್ರವನ್ನು ತಾನೂ ಕೂಡ ತುಂಬಾ ಇಷ್ಟಪಡುವುದಾಗಿ ರಶ್ಮಿಕಾ ಹೇಳಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular