HomeEntertainment400 ಕುಟುಂಬಗಳಿಗೆ ವರ್ಷಪೂರ್ತಿ ಆಹಾರ ಭದ್ರತೆ: 'ಪ್ರಾಜೆಕ್ಟ್ ಅನ್ನಪೂರ್ಣ' ಆರಂಭಿಸಿದ ನಟಿ ರಶ್ಮಿಕಾ !

400 ಕುಟುಂಬಗಳಿಗೆ ವರ್ಷಪೂರ್ತಿ ಆಹಾರ ಭದ್ರತೆ: ‘ಪ್ರಾಜೆಕ್ಟ್ ಅನ್ನಪೂರ್ಣ’ ಆರಂಭಿಸಿದ ನಟಿ ರಶ್ಮಿಕಾ !

ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ದೇವರಕೊಂಡ ಅವರು ಸಮಾಜಮುಖಿ ಸೇವೆಯಲ್ಲಿ ಮತ್ತೊಮ್ಮೆ ಮುಂಚೂಣಿಗೆ ಬಂದಿದ್ದಾರೆ. ಬಡ ಕುಟುಂಬಗಳಿಗೆ ವರ್ಷಪೂರ್ತಿ ಆಹಾರ ಭದ್ರತೆಯನ್ನು ಒದಗಿಸುವ ಸದುದ್ದೇಶದಿಂದ ಅವರು ‘ಪ್ರಾಜೆಕ್ಟ್ ಅನ್ನಪೂರ್ಣ’ ಎಂಬ ಮಹತ್ವದ ದತ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಈ ಲೋಕೋಪಕಾರಿ ಯೋಜನೆ ಮೂಲಕ ನಟಿ ಸುಮಾರು 400 ಕುಟುಂಬಗಳಿಗೆ ಅಗತ್ಯ ಆಹಾರ ಸಾಮಗ್ರಿಗಳನ್ನು ಒದಗಿಸಿ ಆಸರೆಯಾಗುತ್ತಿದ್ದಾರೆ.

ಈ ವಿಶೇಷ ಆಹಾರ ಕಿಟ್‌ನಲ್ಲಿ ಬರೋಬ್ಬರಿ 75 ಕೆಜಿ ಅಕ್ಕಿ, 10 ಕೆಜಿ ಗೋಧಿ ಹಿಟ್ಟು, 15 ಕೆಜಿ ವಿವಿಧ ಬೇಳೆಕಾಳುಗಳು, 10 ಲೀಟರ್ ಅಡುಗೆ ಎಣ್ಣೆ ಹಾಗೂ ರಾಗಿ, ಮಸಾಲೆ ಪದಾರ್ಥಗಳು ಮತ್ತು ಚಹಾ ಪುಡಿ ಸೇರಿವೆ. ದಕ್ಷಿಣ ಭಾರತದ ಎಂಟು ಪ್ರಮುಖ ಸ್ಥಳಗಳಾದ ಹೈದರಾಬಾದ್, ಮಹಬೂಬ್‌ನಗರ, ಅನಂತಪುರ, ಬೆಂಗಳೂರು, ಕೊಚ್ಚಿ, ಚೆನ್ನೈ, ಕೊಡಗು ಮತ್ತು ವಿಜಯವಾಡದ ಕುಟುಂಬಗಳಿಗೆ ಈ ನೆರವು ತಲುಪಲಿದೆ.

ಈ ಸಮಾಜಮುಖಿ ಕಾರ್ಯದ ಬಗ್ಗೆ ಮಾತನಾಡಿದ ರಶ್ಮಿಕಾ, “ನನ್ನ ಮುಂಬರುವ ‘ರಣಬಲಿ’ ಚಿತ್ರದ ಜಯಮ್ಮ ಪಾತ್ರಕ್ಕೂ ನನ್ನ ನಿಜ ಜೀವನಕ್ಕೂ ಸಾಮ್ಯತೆ ಇದೆಯೇ ಎಂದು ಅನೇಕರು ಕೇಳುತ್ತಾರೆ. ಅದಕ್ಕೆ ನನ್ನ ಉತ್ತರ ಹೌದು ಎಂದೇ. ಜನ ನೀವು ನನಗೆ ನೀಡುತ್ತಿರುವ ಪ್ರೀತಿಗೆ ಪ್ರತಿಯಾಗಿ ನಾನು ಸದಾ ಇಂತಹ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುತ್ತೇನೆ” ಎಂದು ಹಂಚಿಕೊಂಡಿದ್ದಾರೆ. ನಟಿಯ ಈ ಹೃದಯಸ್ಪಂದಿ ಕಾರ್ಯಕ್ಕೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ, ಅವರ ಪತಿ ವಿಜಯ್ ದೇವರಕೊಂಡ ಜತೆ ನಟಿಸಿರುವ ಬಹುನಿರೀಕ್ಷಿತ ‘ರಣಬಲಿ’ ಸಿನಿಮಾ ನಾಳೆ ಅಧಿಕೃತವಾಗಿ ತೆರೆಕಾಣಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular