HomeKarnatakaಸಹಾಯದ ನೆಪದಲ್ಲಿ ಆಸ್ಪತ್ರೆಯಲ್ಲೇ ಅತ್ಯಾಚಾರ: ನಗ್ನ ಫೋಟೋ ತೆಗೆದು ಪದೇ ಪದೇ ಕೃತ್ಯವೆಸಗಿದ ಆರೋಪಿ ಅರೆಸ್ಟ್

ಸಹಾಯದ ನೆಪದಲ್ಲಿ ಆಸ್ಪತ್ರೆಯಲ್ಲೇ ಅತ್ಯಾಚಾರ: ನಗ್ನ ಫೋಟೋ ತೆಗೆದು ಪದೇ ಪದೇ ಕೃತ್ಯವೆಸಗಿದ ಆರೋಪಿ ಅರೆಸ್ಟ್

ಮಂಗಳೂರು: ರೋಗಿಗೆ ಸಹಾಯ ಮಾಡುವ ನೆಪದಲ್ಲಿ ಆಸ್ಪತ್ರೆಯಲ್ಲಿಯೇ ಅತ್ಯಾಚಾರ ಎಸಗಿದ ಪ್ರಕರಣ ನಡೆದಿದ್ದು, ಆರೋಪಿಯನ್ನು ಕದ್ರಿ ಠಾಣೆ ಪೋಲೀಸರು ಬಂಧಿಸಿದ್ದಾರೆ.

ಕೇರಳ ಹೊಸದುರ್ಗ ಪುಲ್ಲೂರು ಗ್ರಾಮದ ನಿವಾಸಿ ಸುಜಿತ್ ಬಂಧಿತ ಆರೋಪಿ. ಪಿಸ್ತುಲ ಕಾಯಿಲೆಯಿಂದ ಬಳಲುತ್ತಿದ್ದ ಕಾಸರಗೋಡು ಮೂಲದ ಮಹಿಳೆ ಚಿಕಿತ್ಸೆ ಪಡೆದುಕೊಳ್ಳಲು ಮಾರ್ಚ್ 13ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಆರೋಪಿಯೊಂದಿಗೆ ಬಂದಿದ್ದರು.

ಮಾರ್ಚ್ 16ರಂದು ರಾತ್ರಿ 8 ಗಂಟೆಗೆ ಆಸ್ಪತ್ರೆಗೆ ಬಂದಿದ್ದ ಸುಜಿತ್ ಬಲವಂತವಾಗಿ ಮಹಿಳೆಯ ಬಟ್ಟೆ ತೆಗೆದು ಅತ್ಯಾಚಾರ ಎಸಗಿದ್ದಾನೆ. ಆಕೆಯ ಬೆತ್ತಲೆ ಫೋಟೋಗಳನ್ನು ಸೆರೆಹಿಡಿದಿದ್ದಾನೆ. ಬೆತ್ತಲೆ ಫೋಟೋಗಳನ್ನು ತೋರಿಸಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕದ್ರಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular