ಭುವನೇಶ್ವರ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾ ಮಹಾನಗರ ಪಾಲಿಕೆ ಬಿಜೆಡಿ ಸದಸ್ಯ ಅಮರೇಶ್ ಜೆನಾರನ್ನು ಬಂಧಿಸಲಾಗಿದೆ.
ಒಡಿಶಾದ ಬಾಲೇಶ್ವರದ ನೀಲಗಿರಿ ಪ್ರದೇಶದಬಹರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಮರೇಶ್ ಜೆನಾರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಅವರನ್ನು ಭುವನೇಶ್ವರಕ್ಕೆ ಕರೆತರಲಾಗುತ್ತಿದೆ.
ಅಮರೇಶ್ ಜೆನಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ ೬೪ (ಅತ್ಯಾಚಾರ), ೮೯ (ಅನುಮತಿ ಇಲ್ಲದೇ ಗರ್ಭಪಾತ) ಹಾಗೂ ಪೋಕ್ಸೋ ಕೇಸ್ ಅಡಿಯಲ್ಲಿ ಲಕ್ಷ್ಮೀಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮರೇಶ್ ವಿರುದ್ಧ ಪ್ರಕರಣ ದಾಖಲಾಗಿ, ಬಂಧನವಾಗುತ್ತಿದ್ದಂತೆ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ.