HomeEntertainmentಡಾನ್ 3 ಸಿನಿಮಾದಿಂದ ದಿಢೀರ್ ಹೊರನಡೆದ ರಣವೀರ್ ಸಿಂಗ್: ಸಂಭಾವನೆ ಮತ್ತು ಬಜೆಟ್ ಕಡಿತದ ಗಂಭೀರ...

ಡಾನ್ 3 ಸಿನಿಮಾದಿಂದ ದಿಢೀರ್ ಹೊರನಡೆದ ರಣವೀರ್ ಸಿಂಗ್: ಸಂಭಾವನೆ ಮತ್ತು ಬಜೆಟ್ ಕಡಿತದ ಗಂಭೀರ ಆರೋಪ!

ಬಾಲಿವುಡ್‌ನ ಬಹುನಿರೀಕ್ಷಿತ ‘ಡಾನ್ 3’ ಸಿನಿಮಾದಿಂದ ನಟ ರಣವೀರ್ ಸಿಂಗ್ ದಿಢೀರ್ ಹೊರನಡೆದ ವಿವಾದ ಸದ್ಯ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ವಿಷಯವಾಗಿ ನಟ ರಣವೀರ್ ಸಿಂಗ್ ಮತ್ತು ಚಿತ್ರದ ನಿರ್ದೇಶಕ ಫರ್ಹಾನ್ ಅಖ್ತರ್ ನಡುವಿನ ಮುನಿಸು ಇದೀಗ ಬೀದಿಗೆ ಬಂದಿದೆ. ಇತ್ತೀಚೆಗೆ ನಡೆದ ಸಂಧಾನ ಸಭೆಗಳಲ್ಲಿ ರಣವೀರ್ ಸಿಂಗ್ ತಮ್ಮ ನಿರ್ಧಾರಕ್ಕೆ ಕಾರಣವೇನು ಎಂಬುದನ್ನು ಬಹಿರಂಗಪಡಿಸಿದ್ದು, ಚಿತ್ರತಂಡದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಸಂಧಾನ ಸಭೆಗೆ ಸ್ಟಾರ್ ನಟರ ಹಾಜರಿ ಫರ್ಹಾನ್ ಅಖ್ತರ್ ಅವರು ಪ್ರೊಡ್ಯೂಸರ್ಸ್ ಗಿಲ್ಡ್ ಮೆಟ್ಟಿಲೇರಿದ ನಂತರ ಚಿತ್ರರಂಗದ ಪ್ರಮುಖ ಗಣ್ಯರ ಸಮ್ಮುಖದಲ್ಲಿ ಹಲವು ಸುತ್ತಿನ ರಹಸ್ಯ ಸಂಧಾನ ಸಭೆಗಳು ನಡೆದವು. ಈ ಸಭೆಗಳಲ್ಲಿ ಸಲ್ಮಾನ್ ಖಾನ್, ಹೃತಿಕ್ ರೋಷನ್, ಕರಣ್ ಜೋಹರ್ ಮತ್ತು ಆಲಿಯಾ ಭಟ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಆರಂಭದ ಸಭೆಗಳಿಗೆ ರಣವೀರ್ ಸಿಂಗ್ ಗೈರಾಗಿದ್ದರೂ, ನಂತರ ಅಮೀರ್ ಖಾನ್, ಅನಿಲ್ ಕಪೂರ್, ರೋಹಿತ್ ಶೆಟ್ಟಿ ಮತ್ತು ರಾಜಕುಮಾರ್ ಹಿರಾನಿ ಉಪಸ್ಥಿತರಿದ್ದ ಮುಖ್ಯ ಸಭೆಗೆ ಹಾಜರಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಸಂಭಾವನೆ ಮತ್ತು ಬಜೆಟ್ ಕಡಿತದ ಆರೋಪ ಸಭೆಯಲ್ಲಿ ರಣವೀರ್ ಸಿಂಗ್ ತಾವು ಚಿತ್ರದಿಂದ ಹೊರಬರಲು ನಾಲ್ಕು ಪ್ರಮುಖ ಕಾರಣಗಳನ್ನು ನೀಡಿದ್ದಾರೆ. ಚಿತ್ರದ ಚಿತ್ರಕಥೆ ತಮಗೆ ಸಂಪೂರ್ಣ ತೃಪ್ತಿ ನೀಡಿರಲಿಲ್ಲ ಮತ್ತು ನಿರ್ದೇಶಕ ಫರ್ಹಾನ್ ಅಖ್ತರ್ ಬೇರೆ ಪ್ರಾಜೆಕ್ಟ್‌ಗಳು ಹಾಗೂ ಸಂಗೀತ ಕಚೇರಿಗಳಲ್ಲಿ ಬ್ಯುಸಿಯಾಗಿದ್ದರಿಂದ ಚಿತ್ರಕ್ಕೆ ಸರಿಯಾಗಿ ಸಮಯ ನೀಡುತ್ತಿರಲಿಲ್ಲ ಎಂದು ರಣವೀರ್ ಆರೋಪಿಸಿದ್ದಾರೆ. ಇದರೊಂದಿಗೆ, ತಮಗೆ ನೀಡಬೇಕಾಗಿದ್ದ ಸಂಭಾವನೆಯನ್ನು ಕಡಿತಗೊಳಿಸಲಾಗಿತ್ತು ಮತ್ತು ಚಿತ್ರದ ಒಟ್ಟು ಬಜೆಟ್ ಅನ್ನು 350 ಕೋಟಿ ರೂಪಾಯಿಯಿಂದ ನೇರವಾಗಿ 150 ಕೋಟಿ ರೂಪಾಯಿಗೆ ಇಳಿಸಲಾಗಿತ್ತು ಎಂದು ರಣವೀರ್ ಗಂಭೀರವಾಗಿ ದೂರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಾಟ್ಸಾಪ್ ಚಾಟ್ ಆಧಾರದ ಮೇಲೆ ಫರ್ಹಾನ್ ತಿರುಗೇಟು ರಣವೀರ್ ಸಿಂಗ್ ಅವರ ಈ ಆರೋಪಗಳನ್ನು ಫರ್ಹಾನ್ ಅಖ್ತರ್ ಮತ್ತು ನಿರ್ಮಾಪಕ ರಿತೇಶ್ ಸಿಧ್ವಾನಿ ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ರಣವೀರ್ ಸಿಂಗ್ ಅವರು ಕಳೆದ ಕೆಲವು ವರ್ಷಗಳಿಂದ ಚಿತ್ರದ ಕಥೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ವಾಟ್ಸಾಪ್ ಚಾಟ್‌ಗಳ ದಾಖಲೆಯನ್ನು ಅವರು ಸಭೆಯ ಮುಂದೆ ಇಟ್ಟಿದ್ದಾರೆ. ಒಪ್ಪಂದ ಮುಗಿದ ನಂತರ ಯಾವುದೇ ಸಂಭಾವನೆ ಕಡಿತ ಮಾಡಿಲ್ಲ ಎಂದು ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ.

‘ಧುರಂಧರ್’ ಸಿನಿಮಾ ಗೆಲ್ಲದಿದ್ದರೆ ಡಾನ್ 3 ಬಿಡುತ್ತಿರಲಿಲ್ಲವೇ? ಸಭೆಯಲ್ಲಿ ನಿರ್ಮಾಪಕ ರಿತೇಶ್ ಅವರು ರಣವೀರ್‌ಗೆ ನೇರ ಪ್ರಶ್ನೆಯೊಂದನ್ನು ಕೇಳಿದ್ದಾರೆ. ನಿಮ್ಮ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗದೇ ಹೋಗಿದ್ದರೆ ನೀವು ಡಾನ್ 3 ಚಿತ್ರವನ್ನು ಬಿಡುತ್ತಿದ್ದಿರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರಾಮಾಣಿಕವಾಗಿ ಉತ್ತರಿಸಿದ ರಣವೀರ್, ಒಂದು ವೇಳೆ ಧುರಂಧರ್ ಸಿನಿಮಾ ಸೋತಿದ್ದರೆ ತಾವು ಖಂಡಿತವಾಗಿಯೂ ಡಾನ್ 3 ಚಿತ್ರವನ್ನು ಬಿಡುತ್ತಿರಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ.

45 ಕೋಟಿ ಪರಿಹಾರಕ್ಕೆ ಬೇಡಿಕೆ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳಿಗಾಗಿ ಈಗಾಗಲೇ ಖರ್ಚಾಗಿರುವ 45 ಕೋಟಿ ರೂಪಾಯಿ ಪರಿಹಾರವನ್ನು ನೀಡುವಂತೆ ಫರ್ಹಾನ್ ಅಖ್ತರ್ ತಂಡ ಪಟ್ಟು ಹಿಡಿದಿದೆ. ಆದರೆ ರಣವೀರ್ ಸಿಂಗ್ ತಕ್ಷಣದ ಸೆಟಲ್ಮೆಂಟ್ ಆಗಿ 10 ಕೋಟಿ ರೂಪಾಯಿ ನೀಡಲು ಮುಂದಾಗಿದ್ದಾರೆ. ಜೊತೆಗೆ ಭವಿಷ್ಯದಲ್ಲಿ ಎಕ್ಸೆಲ್ ಎಂಟರ್ಟೈನ್ಮೆಂಟ್ ಜೊತೆ ಮಾಡುವ ಸಿನಿಮಾಗೆ ಶೇಕಡಾ 25 ರಷ್ಟು ಸಂಭಾವನೆ ಕಡಿಮೆ ಮಾಡಿಕೊಳ್ಳುವುದಾಗಿ ಆಫರ್ ನೀಡಿದ್ದಾರೆ. ಆದರೆ, ರಣವೀರ್ ಜೊತೆ ಮುಂದೆಂದೂ ಸಿನಿಮಾ ಮಾಡುವುದಿಲ್ಲ ಎಂದು ಹೇಳಿರುವ ಫರ್ಹಾನ್ ತಂಡ ಈ ಆಫರ್ ಅನ್ನು ತಿರಸ್ಕರಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular