ದಕ್ಷಿಣ ಭಾರತದ ಖ್ಯಾತ ನಟ ವಿಜಯ್ ಅವರು ರಂಜಾನ್ ಪ್ರಯುಕ್ತ ಚೆನ್ನೈನಲ್ಲಿ ಇಫ್ತಾರ್ ಪಾರ್ಟಿಯನ್ನು ಆಯೋಜಿಸಿದ್ದರು. ತಮಿಳಗ ವೆಟ್ರಿ ಕಳಗಂ (ಟಿವಿಕೆ) ವತಿಯಿಂದ ಈ ಕಾರ್ಯಕ್ರಮವನ್ನು ಚೆನ್ನೈನ ರಾಯಪೇಟೆಯಲ್ಲಿರುವ ವೈಎಂಸಿಎ ಮೈದಾನದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಜಯ್ ಅವರು ಮುಸ್ಲಿಂ ಬಾಂಧವರೊಂದಿಗೆ ಇಫ್ತಾರ್ ಆಚರಣೆಗಳಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಅವರು ಸಂಪ್ರದಾಯಬದ್ಧವಾಗಿ ಬಿಳಿ ಬಟ್ಟೆ ಹಾಗೂ ಟೋಪಿ ಧರಿಸಿ ಭಾಗವಹಿಸಿದರು. ಇಸ್ಲಾಮಿಕ್ ಸಂಪ್ರದಾಯದಂತೆ ಉಪವಾಸ ಆಚರಿಸಿ ಪ್ರಾರ್ಥನೆ ಸಲ್ಲಿಸಿದರು. 15 ಸ್ಥಳೀಯ ಮಸೀದಿಗಳ ಇಮಾಮ್‌ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಮಾರು 3,000 ಮಂದಿಗೆ ಅವಕಾಶ ಕಲ್ಪಿಸಲು ಸಿದ್ಧತೆಗಳನ್ನು ಮಾಡಲಾಗಿತ್ತು.
ವಿಜಯ್ ಅವರು 2026ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಎಐಎಡಿಎಂಕೆಯೊಂದಿಗೆ ಮೈತ್ರಿ ಇಲ್ಲದೆ ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸಲು ಅವರು ನಿರ್ಧರಿಸಿದ್ದಾರೆ. ಅಕ್ಟೋಬರ್‌ನಲ್ಲಿ ಟಿವಿಕೆಗಾಗಿ ಮೊದಲ ರ್ಯಾಲಿಯನ್ನು ಸಹ ನಡೆಸಿದ್ದರು. ವಿಜಯ್ ಅಭಿನಯದ ಕೊನೆಯ ಚಿತ್ರ ಜನ ನಾಯಕನ್ ಬಿಡುಗಡೆಗೆ ಸಿದ್ದವಾಗಿದೆ. ವಿಜಯ್ ಅವರು ತಮ್ಮನ್ನು ಕೀಳಾಗಿ ಕಾಣುತ್ತಿದ್ದ ಸಮಯದಲ್ಲೂ ಅಭಿಮಾನಿಗಳು ಪ್ರೀತಿಯಿಂದ ಬೆಂಬಲಿಸಿದರು ಎಂದು ಹೇಳಿದರು. ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲದಿಂದ ತಾನು ರಾಜಕೀಯಕ್ಕೆ ಬಂದಿದ್ದೇನೆ ಎಂದಿದ್ದಾರೆ.
#WATCH | Tamilaga Vettri Kazhagam (TVK) founder and chief Vijay hosts ‘Iftar’ during Ramzan month in Chennai pic.twitter.com/JLDkfbwLZJ
— ANI (@ANI) March 7, 2025