ಸ್ಲಿಮ್ ಆಗಿ ಮಿಂಚುತ್ತಿದ್ದಾರೆ ‘ಮೋಹಕ ತಾರೆ’ ರಮ್ಯಾ : ‘ಜೀರೋ ಸೈಜ್’ ಫೋಟೋಗೆ ಅಭಿಮಾನಿಗಳು ಫಿದಾ

ಬೆಂಗಳೂರು : ಸ್ಯಾಂಡಲ್ ವುಡ್ ಪದ್ಮಾವತಿ, ನಟಿ ಮೋಹಕ ತಾರೆ ರಮ್ಯಾ ದಪ್ಪಾ ಆಗಿದ್ದಾರೆ ಎಂದು ಅವರನ್ನು ಟ್ರೋಲ್ ಮಾಡಲಾಗಿತ್ತು. ಆದರೆ ಈಗ ಕಸರತ್ತು ನಡೆಸಿ ಸ್ಲಿಮ್ ಅಂಡ್ ಫಿಟ್ ಆಗಿ ಅಭಿಮಾನಿಗಳ ಎದುರು ಬಂದಿದ್ದಾರೆ.

ಸದ್ಯ, ಕನ್ನಡಿ ಮುಂದೆ ಡ್ಯಾನ್ಸ್ ಮಾಡಿದ ನಟಿ ರಮ್ಯಾ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಭಾರಿ ಲೈಕ್ಸ್, ಕಮೆಂಟ್ ಗಳು ಬಂದಿದೆ .

ಸ್ಲಿಮ್ ಆಗಿ ಕಾಣಿಸಿಕೊಂಡ ನಟಿ ರಮ್ಯಾ ಕನ್ನಡಿ ಮುಂದೆ ಭರ್ಜರಿ ಡ್ಯಾನ್ಸ್ ಮಾಡಿದ್ದು, ಮೋಹಕ ನಟಿಯ ಡ್ಯಾನ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿರುವ ನಟಿ ರಮ್ಯಾ ಮೊಬೈಲ್ ಹಿಡಿದು ಡ್ಯಾನ್ಸ್ ಮಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.2003 ರಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯಿಸಿದ ಅಭಿ ಚಿತ್ರದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟ ನಟಿ ರಮ್ಯಾ ಮೋಹಕ ನಟಿಯಾಗಿ ಅಪಾರ ಅಭಿಮಾನಿಗಳನ್ನು ಸಂಪಾದನೆ ಮಾಡಿದರು. ಸ್ಯಾಂಡಲ್ ವುಡ್ ಸ್ಟಾರ್ ನಟರಿಗೆ ಜೋಡಿಯಾಗಿ ಕಮಾಲ್ ಮಾಡಿದ ನಟಿ ರಾಜಕೀಯದಲ್ಲೂ ಗಮನ ಸೆಳೆದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read