HomeLatest NewsBREAKING: ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಕೇಸ್: ಆರೋಪಿಗಳ ವಿರುದ್ಧ 600 ಪುಟಗಳ ಚಾರ್ಜ್ ಶೀಟ್...

BREAKING: ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಕೇಸ್: ಆರೋಪಿಗಳ ವಿರುದ್ಧ 600 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಪೊಲೀಸರು

ಬೆಂಗಳೂರು: ನಟ ದರ್ಶನ್ ಅಭಿಮಾನಿಗಳಿಂದ ನಟಿ ರಮ್ಯಾಗೆ ಅಶ್ಲೀಲ ಕಮೆಂಟ್ ಹಾಗೂ ಮೆಸೇಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಸಿಬಿ ಪೊಲೀಸರು ಸಂಪೂರ್ಣ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

ನಟಿ, ಮಾಜಿ ಸಂಸದೆ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಪ್ರಕರಣದ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಇದೀಗ ಆರೋಪಿಗಳ ವಿರುದ್ಧ 600 ಪುಟಗಳ ಸಂಪೂರ್ಣ ಚಾರ್ಜ್ ಶೀಟ್ ನ್ನು ನಾಲ್ಕನೇ ಎಸಿಜಿಎಂ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.

ಚಾರ್ಜ್ ಶೀಟ್ ನಲ್ಲಿ ಆರೋಪಿಗಳು ನಟಿ ರಮ್ಯಾಗೆ ಕಳುಹಿಸಿದ್ದ ಮೆಸೇಜ್, ವಿಡಿಯೋಗಳ ಸಮೇತ ವಿವರಿಸಲಾಗಿದೆ. ರಾಜೇಶ್ ಎಂಬ ಆರೋಪಿ ಐಶ್ವರ್ಯಾ ಎಂಬ ಅಕೌಂಟ್ ಮೂಲಕವಾಗಿ ರಮ್ಯಾಗೆ ಅಶ್ಲೀಲ ವಿಡಿಯೋ ಕಳುಹಿ ವಿಕೃತಿ ಮೆರೆದಿದ್ದ. ಓಬಣ್ಣ, ಗಂಗಾಧರ್, ಭುವನ್ ಗೌಡ ಸೇರಿದಂತೆ ಎಲ್ಲಾ ಆರೋಪಿಗಳ ವಿಕೃತಿ ಚಾರ್ಜ್ ಶೀಟ್ ನಲ್ಲಿ ಬಯಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular