ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತದ ಸ್ಪರ್ಧಿಗಳು ಪದಕದ ಬೇಟೆಯನ್ನು ಮುಂದುವರಿಸಿದ್ದು, 10 ಮೀಟರ್ ವೈಯಕ್ತಿಕ ಏರ್ ರೈಫಲ್ ಸ್ಪರ್ಧೆಯಲ್ಲಿ ರಮಿತಾ ಜಿಂದಾಲ್ ಕಂಚಿನ ಪದಕ ಗೆದ್ದಿದ್ದಾರೆ. ಇದಕ್ಕೂ ಮೊದಲು 10 ಮೀಟರ್ ಏರ್ ರೈಫಲ್ ಮಹಿಳಾ ತಂಡದ ಸದಸ್ಯರಾಗಿದ್ದ ರಮಿತಾ ಬೆಳ್ಳಿ ಪದಕ ಗಳಿಸಿಕೊಟ್ಟಿದ್ದರು.
ಏರ್ ರೈಫಲ್ 10 ಮೀಟರ್ ವೈಯಕ್ತಿಕ ಸ್ಪರ್ಧೆಯಲ್ಲಿ ರಮಿತಾ ಅವರು ಅಂತಿಮವಾಗಿ 230.1 ಅಂಕ ಗಳಿಸುವ ಮೂಲಕ ಕಂಚಿನ ಪದಕಕ್ಕೆ ಭಾಜನರಾಗಿದ್ದಾರೆ. ಈ ಪದಕದೊಂದಿಗೆ ಭಾರತ ಇಂದು ಒಟ್ಟು ಐದು ಪದಕಗಳನ್ನು ಗಳಿಸಿದಂತಾಗಿದೆ.
https://twitter.com/Media_SAI/status/1705799503297802503?ref_src=twsrc%5Etfw%7Ctwcamp%5Etweetembed%7Ctwterm%5E1705799503297802503%7Ctwgr%5E80006730dec8295a0c7fb82460205d47baf65391%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Framitajindalwinsbronzemedalinwomens10mairrifleeventatasiangames2023-newsid-n540662550