ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ : ಇಂದು ಶಂಕಿತನ ʻರೇಖಾಚಿತ್ರʼ ಬಿಡುಗಡೆ

ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದ ಒಂದು ದಿನದ ನಂತರ, ಶಂಕಿತನು ಕೆಫೆಗೆ ತಲುಪಲು ಮತ್ತು ಹೊರಡಲು ತೆಗೆದುಕೊಂಡ ಮಾರ್ಗದಲ್ಲಿದ್ದ ಹಲವಾರು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಸ್ಕ್ಯಾನ್ ಮಾಡುತ್ತಿದ್ದಾರೆ.

ರಾಮೇಶ್ವರಂ ಕೆಫೆ ಬಾಂಬ್‌ ಸ್ಪೋಟ ಪ್ರಕರಣದ  ತನಿಖೆ ನಡೆಸುತ್ತಿರುವ ಪೊಲೀಸರು ಇಂದು ಶಂಕಿತನ ರೇಖಾಚಿತ್ರ ಬಿಡುಗಡೆ ಮಾಡಲಿದ್ದಾರೆ. ಮಧ್ಯಾಹ್ನ 12.56 ಕ್ಕೆ ಸ್ಫೋಟಕ್ಕೆ ಒಂದು ಗಂಟೆ ಮೊದಲು ಕೆಫೆಯಲ್ಲಿ ಕಾಣಿಸಿಕೊಂಡ ಟೋಪಿ, ಕನ್ನಡಕ ಮತ್ತು ಮುಖವಾಡ ಧರಿಸಿದ ವ್ಯಕ್ತಿ ಈ ಪ್ರಕರಣದಲ್ಲಿ ಶಂಕಿತ ಎಂದು ಗುರುತಿಸಲಾಗಿದೆ.

ನಗದು ಪಾವತಿಸಿ ತಿಂಡಿ ಆರ್ಡರ್ ಮಾಡಿದ್ದ ಆತ, ಸ್ಫೋಟ ಸಂಭವಿಸಿದ ಮೂಲೆಯಲ್ಲಿ ಕುಳಿತಿದ್ದ ಆತ, ಡಿಜಿಟಲ್ ಟೈಮರ್ ಮೂಲಕ ಐಇಡಿ ಸ್ಫೋಟಗೊಳ್ಳುವ ಮುನ್ನ ಆವರಣದಿಂದ ಹೊರನಡೆದಿದ್ದ. ಬಳಿಕ ಸ್ಪೋಟ ಸಂಭವಿಸಿ 9 ಮಂದಿ ಗಾಯಗೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read