ಸೌಂದರ್ಯ ಮರೆಮಾಚುವ ಚರ್ಮದ ಸಮಸ್ಯೆಗೆ ರಾಮಬಾಣ ರೋಸ್‌ ಪೌಡರ್‌…!

ಗುಲಾಬಿ ಹೂವುಗಳಿಗೆ ಸಾಕಷ್ಟು ಮಹತ್ವವಿದೆ. ಪ್ರೀತಿ ವ್ಯಕ್ತಪಡಿಸಲು, ಶುಭಾಶಯ ಕೋರಲು ಹೀಗೆ ಅನೇಕ ರೀತಿಯಲ್ಲಿ ಗುಲಾಬಿ ಹೂವುಗಳನ್ನು ಬಳಸಲಾಗುತ್ತದೆ. ಗುಲಾಬಿಯಲ್ಲಿರುವ ಆರೋಗ್ಯ ಪ್ರಯೋಜನಗಳ ಬಗ್ಗೆ ಆಯುರ್ವೇದದಲ್ಲಿ ಹೇಳಲಾಗಿದೆ. ಗುಲಾಬಿ ದಳಗಳು ಮತ್ತು ಒಂದು ಹನಿ ಶ್ರೀಗಂಧದ ಎಣ್ಣೆ ದಣಿವನ್ನು ಹೋಗಲಾಡಿಸುತ್ತದೆ.

ಗುಲಾಬಿಯಿಂದ ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು ಸಹ ಪರಿಹಾರವಾಗುತ್ತವೆ. ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿದ್ದರೆ, ಊತವಿದ್ದರೆ ಅದನ್ನೂ ಗುಲಾಬಿ ಸಹಾಯದಿಂದ ಹೋಗಲಾಡಿಸಬಹುದು. ಸೌಂದರ್ಯ ತಜ್ಞರ ಪ್ರಕಾರ, ರೋಸ್ ಪೌಡರ್ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯೆಂದು ಸಾಬೀತಾಗಿದೆ.

ರೋಸ್‌ ಪೌಡರ್‌ ಪ್ರಯೋಜನಗಳು

ತ್ವಚೆ ಮಂದವಾಗಿ ಚರ್ಮವು ನಿರ್ಜೀವವಾಗಿ ಕಾಣಿಸುತ್ತದೆ. ಇದರಿಂದಾಗಿ ಹೆಚ್ಚು ವಯಸ್ಸಾದಂತೆ ಕಾಣಬಹುದು. ರೋಸ್‌ ಪೌಡರ್‌ ಅನ್ನು ಮುಖಕ್ಕೆ ಹಚ್ಚುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ. ತ್ವಚೆಯ ಹೊಳಪು ಹೆಚ್ಚುತ್ತದೆ.

ಡ್ರೈ ಸ್ಕಿನ್‌ನಿಂದಾಗಿ ನಮ್ಮ ತ್ವಚೆಗೆ ಅನೇಕ ರೀತಿಯ ಅನಾನುಕೂಲಗಳಾಗುತ್ತವೆ. ನಿಮಗೂ ಕೂಡ ಈ ಸಮಸ್ಯೆ ಇದ್ದಲ್ಲಿ ಗುಲಾಬಿ ಪುಡಿಯ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. 10 ನಿಮಿಷಗಳ ನಂತರ ತೊಳೆಯಿರಿ. ಇದು ಚರ್ಮದ ಶುಷ್ಕತೆಯನ್ನು ಹೋಗಲಾಡಿಸುತ್ತದೆ.

ಮೊಡವೆಗಳು ಮುಖದ ಅಂದವನ್ನು ಹಾಳುಮಾಡುತ್ತವೆ. ರೋಸ್ ಪೌಡರ್ ರಾಮಬಾಣಕ್ಕಿಂತ ಕಡಿಮೆಯೇನಲ್ಲ. ಗುಲಾಬಿ ಪುಡಿಯ ಪೇಸ್ಟ್ ಅನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ನಿವಾರಣೆಯಾಗುತ್ತವೆ. ಕೆಲವರಿಗೆ ಅಲರ್ಜಿಯಿಂದ ಚರ್ಮದಲ್ಲಿ ತುರಿಕೆಯಾಗಬಹುದು. ಈ ಕಿರಿಕಿರಿಯನ್ನು ಕಡಿಮೆ ಮಾಡಲು ಗುಲಾಬಿ ಪುಡಿಯು ತುಂಬಾ ಪ್ರಯೋಜನಕಾರಿ. ಚರ್ಮದ ಕೆಂಪು ಬಣ್ಣವನ್ನು ಕಡಿಮೆ ಮಾಡುವ ಮೂಲಕ ನಿಮಗೆ ಪರಿಹಾರವನ್ನು ನೀಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read