HomeKarnatakaSHOCKING NEWS: ತೆಂಗಿನ ಕಾಯಿ ಎಂದು ಎತ್ತಿಕೊಳ್ಳುತ್ತಿದ್ದಂತೆ ಸ್ಫೋಟಗೊಂಡ ನಾಡಬಾಂಬ್

SHOCKING NEWS: ತೆಂಗಿನ ಕಾಯಿ ಎಂದು ಎತ್ತಿಕೊಳ್ಳುತ್ತಿದ್ದಂತೆ ಸ್ಫೋಟಗೊಂಡ ನಾಡಬಾಂಬ್

ರಾಮನಗರ: ತೆಂಗಿನ ಕಾಯಿ ಎಂದು ಎತ್ತಿಕೊಳ್ಳಲು ಹೋಗುತ್ತಿದ್ದಂತೆ ನಾಡಬಾಂಬ್ ಸ್ಫೋಟಗೊಂಡ ಘಟನೆ ರಾಮನಗರ ಜಿಲ್ಲೆಯ ನೇರಳಕಟ್ಟಿ ಗ್ರಾಮದಲ್ಲಿ ನಡೆದಿದೆ.

ನಾಡಬಾಂಬ್ ಸ್ಫೋಟದಲ್ಲಿ ನೌಷಾದ್ ಪಾಷಾ (29) ಎಂಬುವವರು ಗಾಯಗೊಂಡಿದ್ದು, ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾರೋ ಮಾಟ-ಮಂತ್ರ ಮಾಡಿ ತೆಂಗಿನ ಕಾಯಿ ಇಟ್ಟಿರಬೇಕು ಎಂದು ನೌಷಾದ್ ಪಾಷಾ ಎಬುವವರು ಪರಿಶೀಲಿಸುತ್ತಿದ್ದರು. ಈ ವೇಳೆ ಏಕಾಏಕಿ ಅದು ಸ್ಫೋಟಗೊಂಡಿದೆ.

ಕಾಡುಹಂದಿ ಓಡಿಸಲೆಂದು ಇಟ್ಟಿರಬಹುದು ಎಂದು ಶಮ್ಕಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular