HomeKarnatakaBREAKING: ಕೋಟ್ಯಂತರ ರೂಪಾಯಿ ವಂಚನೆ: RTO ಅಧಿಕಾರಿ ಸೇರಿ ಮೂವರ ಬಂಧನ

BREAKING: ಕೋಟ್ಯಂತರ ರೂಪಾಯಿ ವಂಚನೆ: RTO ಅಧಿಕಾರಿ ಸೇರಿ ಮೂವರ ಬಂಧನ

ರಾಮನಗರ: ಹಳೇ ಟ್ರ್ಯಾಕ್ಟರ್ ಗಳಿಗೆ ಹೊಸ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ರಾಮನಗರದ ಆರ್ ಟಿಒ ಅಧಿಕಾರಿ ಸೇರಿದಂತೆ ಮೂವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಆರ್ ಟಿಒ ಅಧಿಕಾರಿ ಶಿವಕುಮಾರ್, ಎಸ್ ಡಿಎ ರಚಿತ್ ರಾಜ್ ಹಾಗೂ ಬ್ರೋಕರ್ ಸತೀಶ್ ಬಂಧಿತರು. ಬಂಧಿತರು ಸೀಜ್ ಮಾಡಲಾಗಿದ್ದ ಹಳೇ ಟ್ರ್ಯಾಕ್ಟರ್ ಗಳಿಗೆ ಹೊಸ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು. ಬರೋಬ್ಬರಿ 2 ಸಾವಿರ ಟ್ರ್ಯಾಕ್ಟರ್ ಗಳಿಗೆ ಹೊಸ ದಾಖಲೆ ನೀಡಿದ್ದರು.

ಮೂವರನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸರು, ಆರ್ ಟಿಒ ಶಿವಕುಮಾರ್, ಎಸ್ ಡಿಎ ರಚಿತ್ ರಾಜ್ ನಿವಾಸದ ಮೇಲೆ ದಾಳಿ ನಡೆಸಿದ್ದು, ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular