HomeKarnatakaBREAKING NEWS: ರಾಮನಗರದಲ್ಲಿ 7 ವರ್ಷದ ಬಾಲಕಿ ಕಿಡ್ನ್ಯಾಪ್ ಗೆ ಯತ್ನ: ಆರೋಪಿ ಅರೆಸ್ಟ್

BREAKING NEWS: ರಾಮನಗರದಲ್ಲಿ 7 ವರ್ಷದ ಬಾಲಕಿ ಕಿಡ್ನ್ಯಾಪ್ ಗೆ ಯತ್ನ: ಆರೋಪಿ ಅರೆಸ್ಟ್

ರಾಮನಗರ: 7 ವರ್ಷದ ಬಾಲಕಿಯನ್ನು ಅಪಹರಿಸಲು ಯತ್ನಿಸಿರುವ ಘಟನೆ ರಾಮನಗರದ ಚಾಮುಂಡಿಪುರ ಲೇಔಟ್ ನಲ್ಲಿ ಬೆಳಕಿಗೆ ಬಂದಿದೆ.

ಬೀಡಿ, ಸಿಗರೇಟ್ ಗಾಗಿ ದುರುಳನೊಬ್ಬ ಬಾಲಕಿಯನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದಾನೆ. ಬಾಲಕಿಯ ಕೈ, ಬಾಯಿಗೆ ಟೇಪ್ ಕಟ್ಟಿ ಹೊತ್ತೊಯ್ಯಲು ಯತ್ನಿಸಿದ್ದ. ಈ ವೇಳೆ ಸ್ಥಳೀಯ ಯುವಕರ ಸಮಯ ಪ್ರಜ್ಞೆಯಿಂದ ಬಾಲಕಿಯನ್ನು ರಕ್ಷಿಸಲಾಗಿದೆ.

ಮಗಳು ಕಾಣುತ್ತಿಲ್ಲ ಎಂದು ತಂದೆ ಸಂತೋಷ್ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಸ್ಥಳೀಯರು ಗಣೇಶ ಮೂರ್ತಿ ಕೂರಿಸಿದ್ದ ಜಾಗದಲ್ಲಿ ಇದ್ದಾಳೆ ಎಂದು ಹೇಳಿದ್ದರು. ಆದರೆ ಅಲ್ಲಿ ಬಂದು ನೋಡಿದರೆ ಬಾಲಕಿ ಇರಲಿಲ್ಲ. ತಕ್ಷಣ ಸ್ಥಳೀಯರು ಎಲ್ಲೆಡೆ ಹುಡುಕಾಡಿದ್ದಾರೆ. ಯುವಕರ ಗಲಾಟೆ, ಹುಡುಕಾಡುತ್ತಿರುವುದನ್ನು ಕಂಡು ದುಷ್ಕರ್ಮಿ ಬಾಲಕಿಯನ್ನು ಬಿಟ್ಟು ಓಡಿದ್ದಾನೆ. ಕತ್ತಲ ಸ್ಥಳದಲ್ಲಿ ಬಿದ್ದಿದ್ದ ಬಾಲಕಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಪ್ಪಿಸಿಕೊಂಡು ಹೋಗುತ್ತಿದ್ದ ಆರೋಪಿ ದರ್ಶನ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಘಟನೆ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular