HomeKarnatakaಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಚಿವರಿಂದ ಶುಭ ಸುದ್ದಿ: ಸಾರಿಗೆ ನಿಗಮಗಳಲ್ಲಿ 13 ಸಾವಿರ ಹುದ್ದೆಗಳ ನೇಮಕಾತಿ

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಚಿವರಿಂದ ಶುಭ ಸುದ್ದಿ: ಸಾರಿಗೆ ನಿಗಮಗಳಲ್ಲಿ 13 ಸಾವಿರ ಹುದ್ದೆಗಳ ನೇಮಕಾತಿ

ಬೆಂಗಳೂರು: ರಾಜ್ಯದ 4 ಸಾರಿಗೆ ನಿಗಮಗಳಲ್ಲಿ 13,000 ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

13,000 ಹುದ್ದೆಗಳ ನೇಮಕಾತಿ ಸಂಬಂಧ ಪ್ರಸ್ತಾವನೆ ಆರ್ಥಿಕ ಇಲಾಖೆ ಮುಂದಿದೆ ಎಂದು ವಿಧಾನಸೌಧದ ಮಹಾದ್ವಾರ ಮೆಟ್ಟಿಲು ಬಳಿ ಏರ್ಪಡಿಸಿದ್ದ ಕೆಎಸ್ಆರ್ಟಿಸಿ ನೂತನ ಬಸ್ ಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾರಿಗೆ ನಿಗಮಗಳಲ್ಲಿ 24,000 ಬಸ್ ಗಳು ಪ್ರತಿದಿನ 1.58 ಲಕ್ಷ ಟ್ರಿಪ್ ಸಂಚರಿಸುತ್ತಿವೆ. ವಾರ್ಷಿಕ ಶೇಕಡ 10 ರಷ್ಟು ಬಸ್ ಗುಜರಿಗೆ ಹೋಗುತ್ತವೆ. ಶೇ. 10 ರಷ್ಟು ಸಿಬ್ಬಂದಿ ಸೇವೆಯಿಂದ ವಯೋ ನಿವೃತ್ತರಾಗುತ್ತಾರೆ. ಕಳೆದ 7 ವರ್ಷಗಳಿಂದ ನಿಗಮಗಳಲ್ಲಿ ಸಿಬ್ಬಂದಿ ನೇಮಕವಾಗಿಲ್ಲ. ಈಗ 13000 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular